Home ಅಪರಾಧ ಶಿವಮೊಗ್ಗದಲ್ಲಿ ಪೊಲೀಸರು ಹಾಗೂ ಕಾಂಗ್ರೆಸ್ ಕಾರ್ಯಕರ್ತರ ನಡುವೆ ವಾಗ್ವಾದ

ಶಿವಮೊಗ್ಗದಲ್ಲಿ ಪೊಲೀಸರು ಹಾಗೂ ಕಾಂಗ್ರೆಸ್ ಕಾರ್ಯಕರ್ತರ ನಡುವೆ ವಾಗ್ವಾದ

by Mahesh malenaadu

ಶಿವಮೊಗ್ಗ

​ಬಿಜೆಪಿ ಕಾರ್ಯಕರ್ತರ ಪ್ರತಿಭಟನೆಗೆ ತಿರುಗೇಟು ನೀಡಲು ಕಾಂಗ್ರೆಸ್ ಕಾರ್ಯಕರ್ತರು ಸಜ್ಜಾಗಿದ್ದರು, ಪ್ರತಿಭಟನೆಯ ಮಾಹಿತಿ ತಿಳಿದ ಪೋಲಿಸರು ​ಕಾಂಗ್ರೆಸ್ ಕಾರ್ಯಕರ್ತರ ಈ ಪ್ರತಿಭಟನೆಯನ್ನು ಸ್ಥಳದಲ್ಲಿಯೆ ಶಾಂತಗೊಳಿಸಿದ್ದಾರೆ.

​ನಾವು ಪ್ರತಿಭಟನೆ ಮಾಡುತ್ತೇವೆ, ನಮ್ಮನ್ನು ಬಿಡಿ ಸರ್ ಎಂದು ಕಾಂಗ್ರೆಸ್ ಕಾರ್ಯಕರ್ತರು ಪಟ್ಟು ಹಿಡಿದು ಕುಳಿತ ಸಮಯದಲ್ಲಿ ಡಿ,ವೈ,ಎಸ್,ಪಿ ಸಂಜೀವ್ ಕುಮಾರ್, ​ಬಿಜೆಪಿ ಪ್ರತಿಭಟನೆ ಮಾಡುವ ವೇಳೆ ನೀವು ಈಗ ಪ್ರತಿಭಟನೆ ಮಾಡುವುದು ಬೇಡ ಎಂದು ತಿಳಿಹೇಳಿದ್ದಾರೆ.

​ನಿನ್ನೆ ಹೇಳದೇ ಕೇಳದೇ ಕೇಂದ್ರ ಸಚಿವರ ಕಾರಿಗೆ ನೀವು ಅಡ್ಡಬಂದಿದ್ದೀರಿ, ​ನಿಮ್ಮ ಈ ವರ್ತನೆ ಸರಿಯಲ್ಲ, ಹೀಗೆ ಮಾಡಿದರೆ ಕಠಿಣ ಕಾನೂನು ಕ್ರಮ ಕೈಗೊಳ್ಳುತ್ತೇವೆ ಎಂದು ಎಚ್ಚರಿಕೆಯನ್ನು‌ಕೂಡ ನೀಡಿದ್ದಾರೆ.

ಈ ಸಮಯ ​ನಾವು ಪ್ರತಿಭಟನೆ ಮಾಡುವುದು ನಮ್ಮ ಮೂಲಭೂತ ಹಕ್ಕು ಎಂದ ಸೂಡಾ ಅಧ್ಯಕ್ಷ ಮಧುಸೂದನ್
​ಕಾನೂನು ಪ್ರಕಾರ ಏನು ಕ್ರಮ ಕೈಗೊಳ್ಳುತ್ತೀರೋ ತೆಗೆದುಕೊಳ್ಳಿ, ನಾವು ಎಲ್ಲದಕ್ಕೂ ಸಿದ್ಧವಿದ್ದೇವೆ ಎಂದು ಪೊಲೀಸರಿಗೆ ತಿರುಗೇಟು ನೀಡಿದ್ದಾರೆ. ಸಮಾಜದ ರಕ್ಷಣೆಯ ಜವಬ್ದಾರಿಹೊತ್ತ ಅರಕ್ಷಕರಾದ DYSP ಸಂಜೀವ್ ಕುಮಾರ್ , ಸರಿ ನೀವು ಪ್ರತಿಭಟನೆ ಮಾಡಿ, ನಾವು ಏನ್ ಮಾಡಬೇಕು ಮಾಡ್ತೀವಿ ಅಂದು ಅವಾಜ್ ಹಾಕಿದ ಘಟನೆ ಇಂದು ಜಿಲ್ಲಾ ಕಾಂಗ್ರೇಸ್ ಕಚೇರಿ ಬಳಿ ನಡೆದಿದೆ.

Spread the love

You may also like

Leave a Comment