Home Uncategorized ಶಿವಮೊಗ್ಗದಲ್ಲಿ ನಿರ್ಮಾಣವಾಗಿದೆ ಸುಸಜ್ಜಿತ ವಿಜ್ಞಾನ ಕೇಂದ್ರ-2 – 12 ಕೋಟಿ ರೂ. ವೆಚ್ಚದಲ್ಲಿ ಲೋಕಾರ್ಪಣೆಗೆ ಸಿದ್ಧತೆ – ವಿಜ್ಞಾನದಲ್ಲಿ ಆಟವಾಡುವ ಜೊತೆಗೆ ಕಲಿಯಲು ಅವಕಾಶ

ಶಿವಮೊಗ್ಗದಲ್ಲಿ ನಿರ್ಮಾಣವಾಗಿದೆ ಸುಸಜ್ಜಿತ ವಿಜ್ಞಾನ ಕೇಂದ್ರ-2 – 12 ಕೋಟಿ ರೂ. ವೆಚ್ಚದಲ್ಲಿ ಲೋಕಾರ್ಪಣೆಗೆ ಸಿದ್ಧತೆ – ವಿಜ್ಞಾನದಲ್ಲಿ ಆಟವಾಡುವ ಜೊತೆಗೆ ಕಲಿಯಲು ಅವಕಾಶ

by Mahesh malenaadu

ಇದು ಅತ್ಯಾಧುನಿಕ ತಂತ್ರಜ್ಞಾನಗಳನ್ನು ಅಳವಡಿಸಿ ನಿರ್ಮಾಣ ಮಾಡಿರುವ ಸುಸಜ್ಜಿತವಾದ ಭವ್ಯ ಕಟ್ಟಡ. ಇಲ್ಲಿ ಜೀವವೈವಿಧ್ಯತೆ, ಸಮುದ್ರ ವಿಜ್ಞಾನ, ಖನಿಜ ಸಂಪನ್ಮೂಲಗಳು, ಸಮುದ್ರದ ಅಡಿಯಲ್ಲಿರುವ ಜಲಚರ ಹಾಗೂ ವನ್ಯಜೀವಿಗಳು ಜೀವವೈವಿಧ್ಯದಿಂದ ಸಮುದ್ರದೊಳಗಿನ ಜೀವಿಗಳವರೆಗೆ ಥೀಮ್ಯಾಟಿಕ್ ಗ್ಯಾಲರಿ ಅಲ್ಲದೆ ವಿವಿಧ ವಿಷಯಾಧಾರಿತ ಗ್ಯಾಲರಿಗಳು ಸ್ಥಾಪಿಸಲಾಗುತ್ತಿದೆ.

ಶಿವಮೊಗ್ಗ ನಗರದ ಸಹ್ಯಾದ್ರಿ ಕಾಲೇಜಿಗೆ ಹೊಂದಿಕೊಂಡಂತಿರುವ ವಿಶಾಲವಾದ ಈ ಐದು ಎಕರೆ ಪ್ರದೇಶದಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರದ ಆರ್ಥಿಕ ನೆರವಿನೊಂದಿಗೆ ವಿಜ್ಞಾನ ಕೇಂದ್ರ-2 ಕಟ್ಟಡ ನಿರ್ಮಿಸಲಾಗಿದೆ. ಸುಮಾರು 10 ಕೋಟಿ. ರೂ.ಗಳ ವೆಚ್ಚದಲ್ಲಿ ಸುಸಜ್ಜಿತವಾದ ಕಟ್ಟಡ ಹಾಗೂ 2 ಕೋಟಿ ರೂ. ಗಳ ಅತ್ಯಾಧುನಿಕ ತಂತ್ರಜ್ಞಾನಗಳನ್ನು ಅಳವಡಿಸಿ, ಸುಸಜ್ಜಿತವಾದ ಈ ಭವ್ಯ ಕೇಂದ್ರ ನಿರ್ಮಿಸಲಾಗಿದೆ. ಈ ಸೈನ್ಸ್ ಸೆಂಟರ್‌ನಲ್ಲಿ ಜೀವ ವೈವಿಧ್ಯತೆ, ಸಮುದ್ರ ವಿಜ್ಞಾನ, ಖನಿಜ ಸಂಪನ್ಮೂಲಗಳು, ಸಮುದ್ರದ ಅಡಿಯಲ್ಲಿರುವ ಜಲಚರ ಹಾಗೂ ವನ್ಯಜೀವಿಗಳು ಜೀವವೈವಿಧ್ಯದಿಂದ ಸಮುದ್ರದೊಳಗಿನ ಜೀವಿಗಳವರೆಗೆ ಥೀಮ್ಯಾಟಿಕ್ ಗ್ಯಾಲರಿ ಅಲ್ಲದೆ ವಿವಿಧ ವಿಷಯಾಧಾರಿತ ಗ್ಯಾಲರಿಗಳನ್ನು ಇಲ್ಲಿ ಸ್ಥಾಪಿಸಲಾಗುತ್ತಿದೆ. ಇಲ್ಲಿ ವಿದ್ಯಾರ್ಥಿಗಳಿಗೆ ಶಿಕ್ಷಣ ನೀಡುವುದು ಮತ್ತು ಮನೋರಂಜನೆ ನೀಡುವುದು ವಿಜ್ಞಾನ ಕೇಂದ್ರದ ಉದ್ದೇಶವಾಗಿದೆ. ವಿಜ್ಞಾನ ವಿಷಯದಲ್ಲಿ ಆಸಕ್ತಿ ಹೊಂದಿರುವ ಜಿಲ್ಲೆಯ ಹಾಗೂ ನೆರೆಯ ಜಿಲ್ಲೆಗಳ ಪ್ರತಿಭಾವಂತ ವಿದ್ಯಾರ್ಥಿಗಳು ಈ ಕೇಂದ್ರದ ಲಾಭ ಪಡೆದುಕೊಳ್ಳಬಹುದಾಗಿದೆ ಎಂದು ಸಂಸದ ಬಿ ವೈ ರಾಘವೇಂದ್ರ ತಿಳಿಸಿದ್ದಾರೆ.

ಇನ್ನು ಈ ವಿಜ್ಞಾನ ಕೇಂದ್ರದ ಮೂಲಕ ಜನಸಾಮಾನ್ಯರಲ್ಲಿ ಹಾಗೂ ವಿದ್ಯಾರ್ಥಿಗಳಲ್ಲಿ ವೈಜ್ಞಾನಿಕ ಮನೋಭಾವನೆ, ವಿಜ್ಞಾನ ಮತ್ತು ತಂತ್ರಜ್ಞಾನ ಬೆಳವಣಿಗೆಯ ಬಗ್ಗೆ ಆಸಕ್ತಿ, ಕ್ರಿಯಾಶೀಲತೆ ಮತ್ತು ಕುತೂಹಲವನ್ನು ಕೆರಳಿಸುವ ಹಾಗೂ ವಿದ್ಯಾರ್ಥಿಗಳಿಗೆ ತಿಳುವಳಿಕೆ, ನವೀನ ಚಿಂತನೆ, ವೈಜ್ಞಾನಿಕ ಮನೋಭಾವವನ್ನು ಮೂಡಿಸುವ ಉದ್ದೇಶ ಹೊಂದಲಾಗಿದೆ. ಅಲ್ಲದೆ, ವಿಷಯಾಧಾರಿತ ವಿಜ್ಞಾನ ಪ್ರದರ್ಶನಗಳು, ಕಾರ್ಯಾಗಾರಗಳು, ಸಂವಾದಾತ್ಮಕ ಶೈಕ್ಷಣಿಕ ಚಟುವಟಿಕೆಗಳು ಮತ್ತು ಸಂಪರ್ಕ ಮುಂತಾದ ಕಾರ್ಯಕ್ರಮಗಳನ್ನು ಆಯೋಜಿಸುವ ಮೂಲಕ ವಿಜ್ಞಾನವನ್ನು ಜನರಿಗೆ ತಲುಪಿಸುವ ಕಾರ್ಯ ಇಲ್ಲಿ ನಡೆಯಲಿದೆ. ವಿಜ್ಞಾನದಲ್ಲಿ ಆಸಕ್ತಿ ಹೊಂದಿರುವ ಪಿಯು ಹಾಗೂ ಕಾಲೇಜು ವಿದ್ಯಾರ್ಥಿಗಳು ಮಾಹಿತಿ ಪಡೆದುಕೊಳ್ಳಲು ಮತ್ತು ಅರ್ಹರು ಸಂಶೋಧನೆ ನಡೆಸಲು ಇಲ್ಲಿ ಅವಕಾಶ ಕಲ್ಪಿಸಲಾಗುತ್ತಿದೆ. ಇದರ ಜೊತೆಗೆ, ಇದೇ ಕಟ್ಟಡದಲ್ಲಿ ತಾರಾಲಯ ಕೂಡ ನಿರ್ಮಿಸಲು ಉದ್ದೇಶಿಸಲಾಗಿದ್ದು, ಇದರಿಂದಾಗಿ ಶಿವಮೊಗ್ಗ ರಾಜ್ಯದ ಪ್ರಮುಖ ಸೈನ್ಸ್ ಟೂರಿಸಂ ಸೆಂಟರ್ ಆಗಿ ಬೆಳೆಯಲಿದೆ. ಎಂದು
ವಿಧ್ವೇಶ್ವರಾಯ ಇಂಡಸ್ಟ್ರಿಲ್ ಅಂಡ್ ಟೆಕ್ನೊಲಾಜಿಕಲ್ ಮ್ಯೂಜಿಯಂನ ಇಂಜಿನಿಯರ್ ತೆರವಿಯರಾಜ ತಿಳಿಸುತ್ತಾರೆ.

ಒಟ್ಟಾರೆಯಾಗಿ ವಿದ್ಯಾರ್ಥಿಗಳನ್ನು ವಿಜ್ಞಾನ ವಿಷಯದತ್ತ ಆಕರ್ಷಿಸುವಂತಹ ಹಾಗೂ ಯುವ ವಿಜ್ಞಾನಿಗಳನ್ನು ರೂಪಿಸುವ ಕೇಂದ್ರಗಳಾಗಿ ಹೊರಹೊಮ್ಮಬೇಕೆಂಬ ಆಶಯದೊಂದಿಗೆ ಈ ವಿಜ್ಞಾನ ಕೇಂದ್ರ ರೂಪುಗೊಳ್ಳುತ್ತಿರುವುದು ವಿಜ್ಞಾನ ವಿದ್ಯಾರ್ಥಿಗಳಿಗೆ ಲಾಭದಾಯಕವಾಗಿದೆ.

Spread the love

You may also like

Leave a Comment