“ಕಲೆಗೆ ಬೆಲೆಯಿಲ್ಲ ಕಲಾವಿದನಿಗೆ ಸಾವಿಲ್ಲ ಅಂತ ಹೇಳ್ತಾರೆ”
ಆದರೆ ಕಲಾವಿದನೊಬ್ಬ ಜೀವನ ಬೇಸತ್ತು ಅತ್ಮ ಹತ್ಯೆಗೆ ಶರಣಾಗಿರುವ ಘಟನೆ ಶಿವಮೊಗ್ಗ ಜಿಲ್ಲೆ ತೀರ್ಥಹಳ್ಳಿ ತಾಲೂಕಿನ ಸಿಬಿನ ಕೆರೆಯಲ್ಲಿ ನಡೆದಿದೆ.
ಸಿಬಿನಕೆರೆ ನಿವಾಸಿಯಾದ ರಾಕೇಶ್ ತಮ್ಮ ಮನೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ.
ತೀರ್ಥಹಳ್ಳಿಯ ಸೀಬಿನಕೆರೆ ರಾಕೇಶ್ ಎಂದರೆ ಸುತ್ತಮುತ್ತಲಿನ ಜನಕ್ಕೆ ಚಿರಪರಿಚಿತ, ಪ್ರಮುಖವಾಗಿ ದಸರ ಹಬ್ಬ ಸೇರಿದಂತೆ ಹಲವು ಹಬ್ಬ ಹರಿದಿನಗಳಲ್ಲಿ ರಾಕೇಶ್ ಹುಲಿ ವೇಶ ತೊಟ್ಟುಬಂದರೆ ನೋಡುಗರಿಗೆ ಅದೆಲ್ಲಿಲದ ಸಂತಸ,ಮನೊರಂಜನೆ
ಕಲಾಪ್ರೇಕ್ಷಕರಿಗೆ ಕಲೆಯ ರಸಧ್ವತಣ ಉಣಬಡಿಸಿದ್ದ ಕಲಾವಿದ ಇದೀಗ ಬಾರದ ಲೋಕಕ್ಕೆ ತೆರಳಿದ್ದಾನೆ, ರಾಕೇಶ್
ತೀರ್ಥಹಳ್ಳಿ ದಸರಾ ಕಾರ್ಯಕ್ರಮದಲ್ಲಿ ಹುಲಿವೇಷದ ಬಣ್ಣ ಹಾಕಿ ಹೆಜ್ಜೆ ಹಾಕುತ್ತಿದ್ದ
ಶಿವಮೊಗ್ಗ ಜಿಲ್ಲೆಯಲ್ಲಿ ಜನಪ್ರಿಯವಾಗಿದ್ದ ಕಲಾವಿದ,
ಸೀಬಿನಕೆರೆಯಲ್ಲಿರೋ ಮನೆಯಲ್ಲಿ ಯಾರೂ ಇಲ್ಲದ ವೇಳೆ ರಾಕೇಶ್ ಆತ್ಮಹತ್ಯೆಗೆ ಶರಣಾಗಿದ್ದಾನೆ.
ಆತ್ಮಹತ್ಯೆ ಹಿಂದಿನ ಕಾರಣ ಇನ್ನೂ ತಿಳಿದು ಬಂದಿಲ್ಲ, ರಾಕೇಶ್ ಆತ್ಮಹತ್ಯೆ ಮಾಡಿಕೊಂಡ ಸ್ಥಳಕ್ಕೆ ತೀರ್ಥಹಳ್ಳಿ ಪೊಲೀಸರು ಬೇಟಿ ನೀಡಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

