Home ಅಪರಾಧ ಡಿಸಿಎಂ ಹಾಗೂ ಸಿಎಂ ಪಿಎ ಹೆಸರು ಹೇಳಿ ₹15 ಲಕ್ಷ ವಂಚಿಸಿದ್ದ ಆರೋಪಿ ಬಂಧನ

ಡಿಸಿಎಂ ಹಾಗೂ ಸಿಎಂ ಪಿಎ ಹೆಸರು ಹೇಳಿ ₹15 ಲಕ್ಷ ವಂಚಿಸಿದ್ದ ಆರೋಪಿ ಬಂಧನ

by Mahesh malenaadu

ಶಿವಮೊಗ್ಗ: ರಿಕ್ರಿಯೇಷನ್ ಕ್ಲಬ್ ಲೈಸೆನ್ಸ್ ಕೊಡಿಸುವುದಾಗಿ ಮಾನ್ಯ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹಾಗೂ ಮುಖ್ಯಮಂತ್ರಿಗಳ ಪಿ.ಎ. ಹೆಸರು ಹೇಳಿಕೊಂಡು ವ್ಯಕ್ತಿಯೊಬ್ಬರಿಗೆ ₹15 ಲಕ್ಷ ರೂ. ವಂಚಿಸಿದ್ದ ಆರೋಪಿಯನ್ನು ತುಂಗಾನಗರ ಠಾಣೆ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಶಿವಮೊಗ್ಗದ ಶರಾವತಿನಗರದ ನಿವಾಸಿ ಹೇಮಂತ್ ಕುಮಾರ್ ಅಲಿಯಾಸ್ ಗಣೇಶ (30) ಬಂಧಿತ ಆರೋಪಿ.

**ಘಟನೆಯ ವಿವರ:**
ಶಿವಮೊಗ್ಗದ ಮಂಜುನಾಥ ಹಂಚಿ ಎಂಬುವರಿಗೆ ರಿಕ್ರಿಯೇಷನ್ ಕ್ಲಬ್ ಲೈಸೆನ್ಸ್ ಕೊಡಿಸುವುದಾಗಿ ನಂಬಿಸಿದ್ದ ಆರೋಪಿ ಹೇಮಂತ್, ಪ್ರಭಾವಿಗಳ ಹೆಸರು ಹೇಳಿ ಅವರಿಂದ ಹಂತ-ಹಂತವಾಗಿ ₹15 ಲಕ್ಷ ಹಣ ಪಡೆದು ವಂಚಿಸಿದ್ದನು. ಈ ಕುರಿತು ಮಂಜುನಾಥ ಹಂಚಿ ಅವರು ನೀಡಿದ ದೂರಿನನ್ವಯ ತುಂಗಾನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ (ಗುನ್ನೆ ನಂ-504/2026, ಕಲಂ 318(4) BNS) ದಾಖಲಾಗಿತ್ತು.

**ಚಿಕ್ಕಮಗಳೂರು ಬಳಿ ಆರೋಪಿ ವಶಕ್ಕೆ:**
ಜಿಲ್ಲಾ ಪೊಲೀಸ್ ಅಧೀಕ್ಷಕರಾದ **ಶ್ರೀ ನಿಖಿಲ್ ಬಿ. (IPS)**, ಹೆಚ್ಚುವರಿ ಪೊಲೀಸ್ ಅಧೀಕ್ಷಕರಾದ **ಶ್ರೀ ಎ.ಜಿ. ಕಾರಿಯಪ್ಪ** ಹಾಗೂ ಡಿವೈಎಸ್ಪಿ **ಶ್ರೀ ಶೀಲವಂತ ಹೊಸಮನಿ** ಅವರ ಮಾರ್ಗದರ್ಶನದಲ್ಲಿ ವಿಶೇಷ ತಂಡ ರಚಿಸಲಾಗಿತ್ತು.

ತುಂಗಾನಗರ ಠಾಣೆ ಇನ್‌ಸ್ಪೆಕ್ಟರ್ **ಶ್ರೀ ಕೆ.ಟಿ. ಗುರುರಾಜ್**, ಪಿಎಸ್ಐ **ಶ್ರೀಮತಿ ಮಂಜಮ್ಮ** ಹಾಗೂ ಸಿಬ್ಬಂದಿಗಳಾದ ಶೋಭರಾಣಿ, ನಾಗರಾಜ, ಹರೀಶ್ ನಾಯ್ಕ, ನಿತಿನ್, ತಮ್ಮಣ್ಣ ಜಂಬಗಿ ಅವರನ್ನೊಳಗೊಂಡ ತಂಡವು ಜುಲೈ 29 ರಂದು ಚಿಕ್ಕಮಗಳೂರು ಜಿಲ್ಲೆಯ ಕಡೂರು ತಾಲೂಕಿನ ಚಿಕ್ಕ ಅಂಗಳ ಗ್ರಾಮದ ರಸ್ತೆ ಬಳಿ ಆರೋಪಿಯನ್ನು ವಶಕ್ಕೆ ಪಡೆದು ದಸ್ತಗಿರಿ ಮಾಡಿದೆ.

ಬಂಧಿತ ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ಮಾನ್ಯ ನ್ಯಾಯಾಲಯವು ಆರೋಪಿಗೆ ನ್ಯಾಯಾಂಗ ಬಂಧನ ವಿಧಿಸಿದೆ. ಸಮಯೋಚಿತ ಕಾರ್ಯಾಚರಣೆ ನಡೆಸಿ ಆರೋಪಿಯನ್ನು ಬಂಧಿಸಿದ ಪೊಲೀಸ್ ತಂಡದ ಕೆಲಸಕ್ಕೆ ಹಿರಿಯ ಅಧಿಕಾರಿಗಳು ಶ್ಲಾಘನೆ ವ್ಯಕ್ತಪಡಿಸಿದ್ದಾರೆ.

Spread the love

You may also like

Leave a Comment