Home ಅಪರಾಧ ಐಷಾರಾಮಿ ವಾಹನದಲ್ಲಿ ದನ ಕಳ್ಳತನ ಮಾಡುತ್ತಿದ್ದ ಆರೋಪಿಗಳ ವಾಹನ ಸಮೇತ ಹೆಡೆಮುರಿ ಕಟ್ಟಿದ ರಿಪ್ಪನಪೇಟೆ ಪೊಲೀಸರು.

ಐಷಾರಾಮಿ ವಾಹನದಲ್ಲಿ ದನ ಕಳ್ಳತನ ಮಾಡುತ್ತಿದ್ದ ಆರೋಪಿಗಳ ವಾಹನ ಸಮೇತ ಹೆಡೆಮುರಿ ಕಟ್ಟಿದ ರಿಪ್ಪನಪೇಟೆ ಪೊಲೀಸರು.

by Mahesh malenaadu

ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲೂಕಿನ ರಿಪ್ಪನಪೇಟೆಯಲ್ಲಿ ಕಳೆದ 15 ದಿನ ಹಿಂದೆ ಯಾರಿಗು ಅನುಮಾನ ಬಾರದಂತೆ ಐಷಾರಾಮಿ‌ ಇನೊವಾ ಕಾರಿನಲ್ಲಿ ಜಾನುವಾರುಗಳ ಕಳ್ಳತನ‌ಮಾಡಲಾಗಿತ್ತು.

ಈ ಕುರಿತು ರಿಪ್ಪನ್ ಪೇಟೆ ಠಾಣೆಯಲ್ಲಿ ದೂರು ದಾಖಲಾಗಿತ್ತು. ಪ್ರಕರಣದ ಬೆನ್ನುಬಿದ್ದ ರಿಪ್ಪನ್ ಪೇಟೆ ಪೋಲಿಸರು ಆರೋಪಿಗಳಾದ ಅಮೀರ್ ಸುಹೇಲ್ (26), ಮಹಮ್ಮದ್ ಇಸ್ರಾರ್ ಉಲ್ಲಾ ಖಾನ್ (20) ಆರೋಪಿಗಳನ್ಬು ಬಂಧಿಸಿ ಪ್ರಕರಣಕ್ಕೆ ಬಳಸಿದ್ದ ಇನೋವ ಕಾರನ್ನು ವಶಪಡಿಸಿಕೊಂಡಿದ್ದಾರೆ.

ಇನ್ನು ಕಳವು ಮಾಡಿದ್ದ ರಾಸುಗಳನ್ನು ಗೋಶಾಲೆಯಲ್ಲಿ ಬಿಟ್ಟಿದ್ದಾರೆ. ಆರೋಪಿಗಳು
ಶಿವಮೊಗ್ಗದ ಹಳೆಮಂಡ್ಲಿ ನಿವಾಸಿಗಳು ಎಂದು ತಿಳಿದು ಬಂದಿದೆ.

Spread the love

You may also like

Leave a Comment