Home ಅಪರಾಧ ಕ್ಷುಲ್ಲಕ ವಿಚಾರಕ್ಕೆ ಚಾಕುವಿನಿಂದ ಇರಿದು ವ್ಯಕ್ತಿ ಕೊಲೆ ಮಾಡಿರುವ ಘಟನೆ ಹೊಸನಗರ ತಾಲೂಕಿನ ಸೊನಲೆ ಗ್ರಾಮದಲ್ಲಿ ನಡೆದಿದೆ

ಕ್ಷುಲ್ಲಕ ವಿಚಾರಕ್ಕೆ ಚಾಕುವಿನಿಂದ ಇರಿದು ವ್ಯಕ್ತಿ ಕೊಲೆ ಮಾಡಿರುವ ಘಟನೆ ಹೊಸನಗರ ತಾಲೂಕಿನ ಸೊನಲೆ ಗ್ರಾಮದಲ್ಲಿ ನಡೆದಿದೆ

by Mahesh malenaadu

ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲೂಕು ಸೊನಲೆ ಗ್ರಾಮದ ಸುತ್ತಮುತ್ತ ಟಿಂಬರ್ ಕೆಲಸ ಮಾಡಿಕೊಂಡಿಂದ ಧಾರವಾಡ ಮೂಲದ ಆರು ಜನ ಕಾರ್ಮಿಕರು,

ಸಹೋದ್ಯೋಗಿಯ ಪತ್ನಿ ವಿಚಾರವಾಗಿ ಬುದ್ಧಿವಾದ ಹೇಳಿದ್ದಕ್ಕೆ ಇಬ್ಬರು ಕಾರ್ಮಿಕರು ಸೇರಿ ಟಿಂಬರ್ ಕಟಿಂಗ್ ಕಾರ್ಮಿಕನನ್ನು ಚಾಕುವಿನಿಂದ ಇರಿದು ಕೊಲೆ ಮಾಡಲಾಗಿದೆ.

ಧಾರವಾಡ ಜಿಲ್ಲೆಯ ಕಲಘಟಗಿ ತಾಲೂಕಿನ ಇಚನಹಳ್ಳಿ ಗ್ರಾಮದ ಪರಶುರಾಮಪ್ಪ ಕೊಲೆಯಾದ ವ್ಯಕ್ತಿ, ಕೊಲೆ ಮಾಡಿದ ಆರೋಪಿಗಳಾದ ಪರಶುರಾಮ ಶೆಟ್ಟಪ್ಪ ತಂಬೂರಿ ಹಾಗೂ ಅರುಣ ಪುನ್ನಪ್ಪ ಲಮಾಣಿ ಇಬ್ಬರ ಬಂಧನವಾಗಿದೆ.

ಕೂಲಿ ಕೆಲಸಕ್ಕೆಂದು ಬಂದಿದ್ದ ಧಾರವಾಡ ಜಿಲ್ಲೆಯ ಇಚನಹಳ್ಳಿ ತಾಂಡ್ಯದ 6 ಮಂದಿ ಕಾರ್ಮಿಕರು
ಕಳೆದ ಮೂರು ತಿಂಗಳಿನಿಂದ ಹೊಸನಗರ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಟಿಂಬರ್ ಕಟಿಂಗ್ ಕೆಲಸ ಮಾಡುತ್ತಿದ್ದರು.

ಸೊನಲೆ ಗ್ರಾಮದಲ್ಲಿ ಬಾಡಿಗೆ ಮನೆಯಲ್ಲಿ ವಾಸವಿದ್ದ ಕಾರ್ಮಿಕರು ನಿನ್ನೆ ಶನಿವಾರ ಸಂಜೆ ಕೆಲಸ ಮುಗಿಸಿ ಮನೆಗೆ ಬಂದು ಪಾರ್ಟಿ ಮಾಡುತ್ತಿದ್ದರು,

ಮದ್ಯಪಾನ ವೇಳೆ ಅರುಣ ಎಂಬುವವನು ಪತ್ನಿಯನ್ನು ಬಿಟ್ಟ ವಿಚಾರವಾಗಿ ಮೃತ ಪರಶುರಾಮ ಲಮಾಣಿ ಬುದ್ಧಿವಾದ ಹೇಳಿದ್ದಾನೆ, ಇದೇ ವಿಚಾರಕ್ಕೆ ಇಬ್ಬರ ನಡುವೆ ಮಾತಿನ ಚಕಮಕಿ ನಡೆದಿದೆ, ಜಗಳ ನಿಂತ ವೇಳೆ ಅಡುಗೆ ಮನೆಯಿಂದ ತರಕಾರಿ ಕತ್ತರಿಸುವ ಚಾಕು ತಂದ ಪರಶುರಾಮ ಶೆಟ್ಟಪ್ಪ ಪರಶುರಾಮ ಲಮಾಣಿ ಕುತ್ತಿಗೆಯ ಬಲಭಾಗಕ್ಕೆ ಇರಿದಿದ್ದಾನೆ, ಚಾಕು ಇರಿತದಿಂದ ತೀವ್ರ ರಕ್ತಸ್ರಾವಗೊಂಡ ಪರಶುರಾಮ ಲಮಾಣಿ ಸ್ಥಳದಲ್ಲೇ ಕುಸಿದು ಬಿದ್ದು ಸಾವನ್ನಪ್ಪಿದ್ದಾನೆ.

ಘಟನೆ ಕುರಿತು ಹೊಸನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Spread the love

You may also like

Leave a Comment