Home ಅಪರಾಧ ಕೊಲೆ ಆರೋಪಿಗೆ ಜೀವಾವದಿ ಶಿಕ್ಷೆ, ಜಾಗದ ವಿಚಾರಕ್ಕಾಗಿ ಮಹಿಳೆಯ ಕೊಲೆ ಮಾಡಿದ್ದ ಆರೋಪಿ

ಕೊಲೆ ಆರೋಪಿಗೆ ಜೀವಾವದಿ ಶಿಕ್ಷೆ, ಜಾಗದ ವಿಚಾರಕ್ಕಾಗಿ ಮಹಿಳೆಯ ಕೊಲೆ ಮಾಡಿದ್ದ ಆರೋಪಿ

by Mahesh malenaadu
      1. ಮಹಿಳೆ ಕೊಲೆ ಪ್ರಕರಣದಲ್ಲಿ ಆರೋಪಿಗೆ ಜೀವಾವಧಿ ಕಾರಾಗೃಹ ಹಾಗೂ ೫೦ ಸಾವಿರ ರೂ. ಗಳ ದಂಢ ವಿಧೀಸಿ ಶಿವಮೊಗ್ಗ ೫ ನೇ ಹೆಚ್ಚುವರಿ ನ್ಯಾಯಾಲಯ ರೀರ್ಪು ನೀಡಿದೆ.
        ೨೦೨೦ ರ ಆಗಸ್ಟ್ ೨೫ ರಂದು ಸೊರಬ ತಾಲೂಕಿನ ಆನವಟ್ಟಿ ಹೊಬಳಿಯ ಸಮನವಳ್ಳಿ ಗ್ರಾಮದಲ್ಲಿ ರಾಜೇಶ್ವರಿ(೩೫) ಎಂಬುವ ಮಹಿಳೆ ಅವರ ಕುಟುಂಬ ಸದಸ್ಯರೊಂದಿಗೆ
        ಮನೆಯ ಮುಂದೆ ಕುಳಿತಿದ್ದ ಸಮಯದಲ್ಲಿ, ಅದೇ ಗ್ರಾಮದ ಮಂಜುನಾಥ್ ಬಿನ್ ಆನಂದಪ್ಪ (೨೫) ಎಂಬುವವನು ಜಾಗದ ವಿಚಾರವಾಗಿ ಜಗಳಕ್ಕೆ ಮುಂದಾಗಿದ್ದಾನೆ,

ಜಗಳವು ತಾರಕ್ಕರೆರಿದ ನಂತರ ರಾಜೇಶ್ವರಿ ಪೋಲಿಸ್ ಠಾಣೆಗೆ ದೂರು ನೀಡಲು ತೆರಳಿತಿದ್ದ ವೇಳೆ ಆರೋಪಿ ಮಂಜುನಾಥ್ ಏಕಾಏಕಿ ಮಚ್ಚಿನಿಂದ ರಾಜೇಶ್ವರಿಯವರ ತಲೆಗೆ ಹಲ್ಲೆ ನಡೆಸಿದ್ದಾನೆ, ತೀವ್ರವಾಗಿ ಹಲ್ಲೆಗೊಳಗಾಗಿದ್ದ ರಾಜೇಶ್ವರಿ ಸ್ಥಳದಲ್ಲೆ ಮೃತ ಪಟ್ಟಿರುತ್ತಾರೆ, ಈ ಘಟನೆಯು ಗ್ರಾಮದಲ್ಲಿ ಆತಂಕ ಮೂಡಿಸಿತ್ತು, ಘಟನೆಯ ಸಂಭAದ ಆನವಟ್ಟಿ ಪೋಲಿಸ್ ಠಾಣೆಯಲ್ಲಿ ದೂರು ಕೂಡ ದಾಖಲಾಗಿತ್ತು,

ಪ್ರಕರಣದ ತನಿಖೆಯನ್ನು ಆಗಿನ ಸೊರಬ ವೃತ್ತದ ಸಿಪಿಐ ಆರ್,ಡಿ, ಮರುಳ ಸಿದ್ದ ಅವರು ನಡೆಸಿ, ಅಗತ್ಯ ಸಾಕ್ಷಾö್ಯಧಾರಗಳನ್ನು ಸಂಗ್ರಹಿಸಿ ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿಯನ್ನು(ಚಾರ್ಜ್ ಶೀಟ್) ಸಲ್ಲಿಸಿದ್ದರು, ಪ್ರಕರಣದ ವಿಚಾರಣೆಯು ಶಿವಮೊಗ್ಗದ ೫ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದಲ್ಲಿ ನಡೆದಿತ್ತು, ಸರ್ಕಾರದ ಪರವಾಘಿ ಅಭಿಯೋಜಕ ಅಣ್ಣಪ್ಪನಾಯಕ ಅವರು ಅಮರ್ಥವಾಗಿ ವಾದ ಮಂಡಿಸಿದ್ದರು.

ಸಾಕ್ಷಾö್ಯಧಾರಗಳು ಹಾಗೂ ವಾದ ಪ್ರತಿವಾದಗಳನ್ನು ಪರಿಶೀಲಿಸಿದ ನ್ಯಾಯಾಲಯವು ಆರೋಪಿ ವಿರುದ್ದ ಆರೋಪ ಸಾಭಿತಾಗಿರುವುದನ್ನು ಅಭಿಪ್ರಾಯಪಟ್ಟಿತ್ತು, ಇದರ ಆಧಾರದ ಮೇಲೆ ಮಾನ್ಯ ನ್ಯಾಧಿಶರಾದ ರವೀಂದ್ರ ಆರ್. ಅವರುಆರೋಪಿಗೆ ಜೀವಾವದಿ ಕಾರಾಗೃಹ ಶೀಕ್ಷೆ ಹಾಗೂ ೫೦,೦೦೦ ದಂಡ ವಿಧಿಸಿ ಆದೇಶ ಹೊರಡಿಸಿದೆ.

Spread the love

You may also like

Leave a Comment