ಶಿವಮೊಗ್ಗದಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಹೇಳಿಕ
ಬರುವ ಶನಿವಾರ ಹಾಗೂ ಭಾನುವಾರ ಎಸ್ಐಆರ್ ಮಹಾ ಸಂಪರ್ಕ ಅಭಿಯಾನ ಹಮ್ಮಿಕೊಂಡಿದ್ದೇವೆ ರಾಜ್ಯದ ಎಲ್ಲಾ ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿಯ ಸಂಸದರು, ಶಾಸಕರ ನೇತೃತ್ವದಲ್ಲಿ ಎರಡು ದಿನ ಮಹಾ ಸಂಪರ್ಕ ಅಭಿಯಾನ ನಡೆಯಲಿದೆ, ಒಂದು ಕೋಟಿ ಮನೆಗಳನ್ನ ತಲುಪಬೇಕು
ಈ ಮೂಲಕ ಎಸ್ಐಆರ್ ಬಗ್ಗೆ ಜಾಗೃತಿ ಮೂಡಿಸಬೇಕು
ಶನಿವಾರ, ಭಾನುವಾರ ಎಸ್ಐಆರ್ ಮಹಾ ಸಂಪರ್ಕ ಅಭಿಯಾನ ನಡೆಯಲಿದೆ
ಪ್ರತಿಯೊಬ್ಬ ಕಾರ್ಯಕರ್ತ ಕನಿಷ್ಠ ಇಪ್ಪತ್ತು ಮನೆಗಳನ್ನ ತಲುಪಬೇಕು .ಎಂಬುವ ಉದ್ದೇಶದಿಂದ ಈ ಅಭಿಯಾನ.
ರಾಜ್ಯದಲ್ಲಿ ಭೀಕರ ಬರಗಾಲವನ್ನ ಎದುರು ನೋಡ್ತಿದ್ದೇವೆ
ರಾಜ್ಯದ ಮುಖ್ಯಮಂತ್ರಿಗಳು ವಿ,ಸಿ ಮೂಲಕ ಸಭೆ ಮಾಡೋದನ್ನ ಬಿಟ್ಟರೆ ಬೇರೆ ಏನು ಮಾಡಿಲ್ಲ ಯಾವುದೇ ಸಚಿವರು ಜಿಲ್ಲಾ ಪ್ರವಾಸ ಮಾಡುತ್ತಿಲ್ಲ ಸಚಿವರಾಗಲಿ ಸರ್ಕಾರವಾಗಲಿ ಜನರ ಸಮಸ್ಯೆ ಕೇಳುತ್ತಿಲ್ಲ, ರಾಜ್ಯದ ಮುಖ್ಯಮಂತ್ರಿಗಳು ಹಿರಿಯ ನಾಯಕರ ತಂಡ ಕರೆದುಕೊಂಡು ದೆಹಲಿಗೆ ಹೋಗಿದ್ದಾರೆ,
ಪ್ರಧಾನಿಗಳಿಗೆ ಕೇವಲ ಪತ್ರ ಬರೆದು ರಾಜ್ಯ ಸರ್ಕಾರದ ಜವಾಬ್ದಾರಿ ಮುಗಿದು ಹೋಯ್ತು ಅಂದುಕೊಂಡಿದ್ದಾರೆ, ರಿಯಲ್ ಎಸ್ಟೇಟ್ ಬಗ್ಗೆ ತಲೆ ಕೆಡಿಸಿಕೊಂಡಂತೆ ರೈತರ ಸಂಕಷ್ಟದ ಬಗ್ಗೆಯು ಸಿಎಂ ತಲೆ ಕೆಡಿಸಿಕೊಳ್ಳಬೇಕು, ರೈತರು ಬಿತ್ತನೆ ಮಾಡಿದ ಬೆಳೆ ಮೊಳಕೆ ಹೊಡೆಯದೆ ಸಂಕಷ್ಟಕ್ಕೆ ಸಿಲುಕಿದ್ದಾರೆ, ಜಿಲ್ಲಾ ಪ್ರವಾಸ ಮಾಡಿ ರೈತರ ಸಮಸ್ಯೆ ಆಲಿಸುವ ಕೆಲಸ ಸರ್ಕಾರ ಮಾಡಬೇಕು
ಯಡಿಯೂರಪ್ಪನವರು ಇದ್ದಾಗ ಪರಿಹಾರ ಹೇಗೆ ಕೊಟ್ಟಿದ್ದರು ಎಂಬದು ಸಹ ಗೊತ್ತಿದೆ.
ದೆಹಲಿಯ ಜಂತರ್ ಮಂತರ್ ನಲ್ಲಿ ನೀಟ್ ವಿಚಾರವಾಗಿ ಪ್ರತಿಭಟನೆ ನಡೆದಿದೆ, ಪ್ರತಿಭಟನೆ ಬಗ್ಗೆ ನಮಗೆ ವಿರೋಧ ಇಲ್ಲ
ಪ್ರತಿಭಟನೆಯ ನೆಪದಲ್ಲಿ ಅರಾಜಕತೆ ಸೃಷ್ಠಿಸುವ ಕೆಲಸ ಆಗಿದೆ, ಅನೇಕ ಯುವಕರಿಗೆ ಯಾಕೇ ಬಂದಿದ್ದೇವೆ ಎನ್ನುವುದೇ ಗೊತ್ತಿಲ್ಲ
ದೇಶದ ವಿರುದ್ದ ಹೇಳಿಕೆ ನೀಡಿದ್ದನ್ನು ಸಹ ನಾವು ನೋಡಿದ್ದೇವೆ ವಿರೋಧ ಪಕ್ಷದ ಕುಮ್ಮಕ್ಕಿನಿಂದ ದೇಶದ ವಿರುದ್ದ ಷಡ್ಯಂತ್ರ ನಡೆದಿರುವ ಕುರಿತು ಸಹ ಚೆರ್ಚೆ ಆಗುತ್ತಿದೆ
ಮಾಜಿ ಸಿಎಂ ಸಿದ್ದರಾಮಯ್ಯನವರು ದುಷ್ಟ ಪ್ರಧಾನಿ ಎಂದಿದ್ದಾರೆ
ತಾವು ಮುಖ್ಯಮಂತ್ರಿ ಇದ್ದಾಗ ಲಕ್ಷಾಂತರ ಯುವಕರು ಪ್ರತಿಭಟನೆ ಮಾಡಿದ್ರು
ಆಗ ಸಿದ್ದರಾಮಯ್ಯನವರೇ ಎಲ್ಲಿ ಹೋಗಿತ್ತು ನಿಮ್ಮ ಯುವಕರ ಬಗೆಗಿನ ಕಾಲಜಿ
ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಕಾಲ್ತುಳಿದಲ್ಲಿ ರಾತ್ರೋರಾತ್ರಿ ತನಿಖೆ ಮಾಡಿಸಲು ಹೋದ್ರಿ
ನಿಮ್ಮ ಪುಕ್ಕಟೆ ಪ್ರಚಾರಕ್ಕಾಗಿ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಘಟನೆಗಳಾದವು
ಕೇಂದ್ರ ಸರ್ಕಾರ, ಪ್ರಧಾನಿಗಳು ಎಚ್ಚೇತ್ತುಕೊಂಡು ನೀಟ್ ಪರೀಕ್ಷೆಯನ್ನು ಯಶಸ್ವಿಯಾಗಿ ನಡೆಸಿದ್ದಾರೆ
ಸಿದ್ದರಾಮಯ್ಯ ನವರು ತಾವು ಸಿಎಂ ಆಗಿದ್ದಾಗ ಎಷ್ಟು ಲಕ್ಷ ಹುದ್ದೆ ಭರ್ತಿ ಮಾಡಿದ್ದೀರಾ ಎಂಬುದನ್ನ ರಾಜ್ಯದ ಜನರಿಗೆ ತಲುಪಿಸಬೇಕು
ಬಿಡದಿ ಹೋರಾಟ ಸಂದರ್ಭದಲ್ಲಿ ಸಿಎಂಗೆ ಆಗ್ರಹ ಮಾಡಿದ್ದೇನೆ
ನೀವು ಕನಕಪುರದ ಸಿಎಂ ಅಲ್ಲ ರಾಜ್ಯದ ಮುಖ್ಯಮಂತ್ರಿಗಳು
ರಿಯಲ್ ಎಸ್ಟೆಟ್ ಹಿತದೃಷ್ಠಿಯಿಂದ ಎರಡನೇ ವಿಮಾನ ನಿಲ್ದಾಣವನ್ನ ಕನಕಪುರಕ್ಕೆ ತಗೆದುಕೊಂಡು ಹೋಗ್ತಿದ್ದೀರಾ
ತುಮಕೂರಿಗೆ ಎರಡನೇ ವಿಮಾನ ನಿಲ್ದಾಣ ತಂದರೆ ಮಧ್ಯ ಕರ್ನಾಟಕದ ಯುವಕರಿಗೆ ಅನುಕೂಲ ಆಗಲಿದೆ
ರಿಯಲ್ ಎಸ್ಟೇಲ್ ಕಣ್ಣುಮುಂದೆ ಇಟ್ಟಕೊಂಡರೆ ರಾಜ್ಯದ ಜನರಿಗೆ ಅನುಕೂಲ ಆಗಲ್ಲ
ಸಿಎಂ ಸಮಗ್ರವಾಗಿ ಪರಿಶೀಲಿಸಿ ಒಳ್ಳೆ ನಿರ್ಧಾರ ತಗೆದುಕೊಳ್ಳಬೇಕು
*ಗೃಹಲಕ್ಷ್ಮೀ ಅರ್ಜಿ ವಿಚಾರದಲ್ಲಿ ಗೊಂದಲ ವಿಚಾರ*
ಗೊಂದಲ ಸೃಷ್ಟಿ ಮಾಡಿರೋದು ರಾಜ್ಯ ಸರ್ಕಾರವೇ
ರಾಜ್ಯ ಸರ್ಕಾರದ ಬೊಕ್ಕಸ ಖಾಲಿಯಾಗಿರೋದಕ್ಕೆ ಹೊಸ ಹೊಸ ಕಂಡಿಷನ್ ಹಾಕ್ತಿದ್ದಾರೆ
ಅಧಿವೇಶನದಲ್ಲಿ ಈ ಬಗ್ಗೆ ಚರ್ಚೆ ಮಾಡುತ್ತೇವೆ
ದೆಹಲಿಯ ಪರಿಸ್ಥಿತಿಯನ್ನ ದುರುಪಯೋಗ ಪಡಿಸಿಕೊಳ್ಳುವ ಕೆಲಸ ವಿರೋಧ ಪಕ್ಷ ಮಾಡ್ತಿದೆ
ವ್ಯವಸ್ಥೆ ಸರಿ ಹೋಗ್ಬೇಕು ವಿದ್ಯಾರ್ಥಿಗಳಗೆ ನಷ್ಟ ಆಗಬಾರದಾಗಿತ್ತು
ಅರಾಜಕತೆ ಸೃಷ್ಠಿಸುವ ಷಡ್ಯಂತ್ರ ವಿರೋಧ ಪಕ್ಷಗಳಿಂದ ನಡೆಯುತ್ತಿದೆ

