Home Student Life ಶಾಲೆ ಡ್ರಂ ಸೆಟ್ ಹೆಸರಲ್ಲಿ ಲಂಚ ಕೇಳಿದ್ದ ಶಿಕ್ಷಕ. ಶಿಕ್ಷಕನ ಬ್ಯಾಂಡ್ ಬಾರಿಸಿದ ಲೋಕಾಯುಕ್ತ ಅಧಿಕಾರಿಗಳು

ಶಾಲೆ ಡ್ರಂ ಸೆಟ್ ಹೆಸರಲ್ಲಿ ಲಂಚ ಕೇಳಿದ್ದ ಶಿಕ್ಷಕ. ಶಿಕ್ಷಕನ ಬ್ಯಾಂಡ್ ಬಾರಿಸಿದ ಲೋಕಾಯುಕ್ತ ಅಧಿಕಾರಿಗಳು

by Mahesh malenaadu

7ನೇ ತರಗತಿ ವಿದ್ಯಾರ್ಥಿನಿಗೆ ಸೀಟು ನೀಡಲು ಲಂಚಕ್ಕೆ ಬೇಡಿಕೆ ಇಟ್ಟಿದ್ದ ಪ್ರಾಂಶುಪಾಲ ರೆಡ್‌ಹ್ಯಾಂಡಾಗಿ ಅರೆಸ್ಟ್ ಆಗಿದ್ದಾನೆ. ಶಿವಮೊಗ್ಗ ಜಿಲ್ಲೆ ಭದ್ರಾವತಿ ತಾಲೂಕಿನ ಹುಣಸೇಕಟ್ಟೆಯ ಕಿತ್ತೂರು ರಾಣಿ ಚೆನ್ನಮ್ಮ ವಸತಿ ಶಾಲೆ ಮೇಲೆ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿದ್ದಾರೆ.

7 ನೇ ತರಗತಿ ಅಡ್ಮಿಷನ್ ಮಾಡಿಕೊಳ್ಳಲು ನೀವು ವಸತಿ ಶಾಲೆಗೆ ದೇಣಿಗೆ ನೀಡ ಬೇಕು, ಅದು ಶಾಲೆಯ ಡ್ರಂ ಸೆಟ್ ಗೆ ವ್ಯಯಿಸಲಾಗುತ್ತದೆ ಎಂದು 20 ಸಾವಿರ ಲಂಚದ ಆಮೀಶ ವೊಡ್ಡಿದ್ದ ಶಾಲೆಯ ಪ್ರಾಶುಪಾಲರಾದ ನಾಮದೇವ್.

ಮುಂಗಡವಾಗಿ 10 ಸಾವಿರ ಲಂಚದ ಹಣವನ್ನು ನಾಮದೇವ್ ಸ್ವೀಕರಿಸಲು ಮುಂದಾದಾಗ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿದ್ದಾರೆ.

ವಿದ್ಯಾರ್ಥಿನಿಯ ತಂದೆ ನೀಡಿದ ದೂರಿನ ಮೇರೆಗೆ ಲೋಕಾಯುಕ್ತ ಎಸ್ ಪಿ ಕೌಲಾಪುರೆ ಮಾರ್ಗದರ್ಶನದಲ್ಲಿ ಇನ್ಸಪೆಕ್ಟರ್ ರುದ್ರೇಶ್ ತಂಡದಿಂದ ದಾಲೀಪೊಲೀಸರ ಭರ್ಜರಿ ಕಾರ್ಯಾಚರಣೆ ನಡೆಸಿದ್ದು
ಈ ಸಮಯ
ಲೋಕಾಯುಕ್ತ ಎಸ್‌ಪಿ ಎಂ.ಎಸ್. ಕೌಲಾಪುರೆ ಮಾರ್ಗದರ್ಶನದಲ್ಲಿ ಇನ್ಸ್‌ಪೆಕ್ಟರ್ ರುದ್ರೇಶ್ ತಂಡದಿಂದ ದಾಳಿ ನಡೆಸಿದ್ದು ಈ ಸಮಯದಲ್ಲಿ ಹುಣಸೆಕಟ್ಟೆ ರಾಣಿ ಚನ್ನಮ್ಮ ವಸತಿ ಶಾಲೆಯ ಪ್ರಾಶುಪಾಲನಾದ ನಾಮದೇವ್ ರೆಡ್ ಹ್ಯಾಂಡಾಗಿ ಲೀಕಾಯುಕ್ತರ ಬಲೆಗೆ ಸಿಲುಕಿದ್ದಾನೆ.

ದಾಳಿ ವೇಳೆ ಹ್ಯಾಂಡ್ ಆಗಿ ಸಿಕ್ಕಿಬಿದ್ದ ಪ್ರಾಂಶುಪಾಲ ನಾಮದೇವ್

Spread the love

Leave a Comment