14
ಶಿವಮೊಗ್ಗ: ನಗರದ ಹೊಳೆ ಬಸ್ಟಾಪ್ ಸೇತುವೆ ಬಳಿ ಮಹಿಳೆಯೊಬ್ಬರು ತುಂಗಾ ನದಿಗೆ ಹಾರಿ ಆತ್ಮಹತ್ಯೆಗೆ ಯತ್ನಿಸಿರುವ ಶಂಕೆ ವ್ಯಕ್ತವಾಗಿದೆ.
ಶಿವಮೊಗ್ಗ ನಗರದ ಪ್ರಸಿದ್ಧ ತುಂಗಾ ನದಿಯ ಸೇತುವೆ ಳಿ ಮಹಿಳೆಯ ಮೊಬೈಲ್ ಹಾಗೂ ದುಪಟ್ಟ ದೊರೆತಿದ್ದು. ಮಹಿಳೆ ಆತ್ಮಹತ್ಯೆ ಮಾಡಿಕೊಂಡಿರ ಬಹುದು ಎಂದು ಶಂಕಿಸಲಾಗಿದೆ,
ಇನ್ನು ವಿಷಯ ತಿಳಿಯುತ್ತಿದ್ದಮತೆ ಸ್ಥಳಕ್ಕೆ ಅಗ್ನಿ ಶಾಮಕ ಸಿಬ್ಬಂದಿ ಹಾಗು ಕೋಟೆ ಠಾಣೆ ಪೋಲಿಸರು ಆಗಮಿಸಿ ನದಿಯಲ್ಲಿ ಶೋದ ಕಾರ್ಯ ನಡೆಸಿದ್ದಾರೆ.
ರಬ್ಬರ್ ಬೋಟ್ ಗಳನ್ನು ಬಳಸಿ ಮಹಿಳೆಯ ಶವಕ್ಕಾಗಿ ಅಗ್ನಿ ಶಾಮಕದಳ ಹುಡುಕಾಟ ನಡೆಸಿದ್ದು , ಇತ್ತ ಸೇತುವೇ ಮೇಲೆ ನೂರಾರು ಜನ ಕಾರ್ಯಾಚರಣೆಯ ವಿಕ್ಷಿಸಲು ತುಂಗಾ ನದಿ ಸೇತುವೆ ಮೇಲೆ ದೊಡ್ಡ ಸಂಖ್ಯೆಯಲ್ಲಿ ಜನ ಸೇರಿದ್ದು, ಇದರಿಂದಾಗಿ ಸೇತುವೇ ಮೇಲೆ ವಾಹನ ಸಂಚಾರಕ್ಕೆ ಅಡಚಣೆ ಉಂಟಾಗಿದೆ, ಟ್ರಾಫಿಕ್ ಪೋಲಿಸರು ಸಮಚಾರದಟ್ಟಣೆ ನಿಯಂತ್ರಿಸಲು ಹರಸಾಹಸ ಪಡುತ್ತಿದ್ದಾರೆ.

