20
ಶಿವಮೊಗ್ಗದಲ್ಲಿ ಗುರುವಾರ ನಡೆದ ರಾಜಕೀಯ ಹೈಡ್ರಾಮದ ಮುಂದುವರೆದ ಭಾಗವಾಗಿ ಇಂದು ಜಯನಗರ ಪೋಲೀಸ್ ಠಾಣೆಯಲ್ಲಿ ಪ್ರಕರಣವೊಂದು ದಾಖಲಾಗಿದೆ.
ನಿನ್ನೆ ನಗರದ ಕಾಂಗ್ರೇಸ್ ಕಚೇರಿಗೆ ಮುತ್ತಿಗೆ ಹಾಕುವ ಸಮಯದಲ್ಲಿ ಕಚೇರಿಯ ಮೇಲೆ ಮೊಟ್ಟೆ ತೂರಲಾಗಿದೆ ಎಂದು ಕೆಲ ಬಿಜೆಪಿ ಕಾರ್ಯಕರ್ತರ ವಿರುದ್ದ ಶಿವಮೊಗ್ಗದ ಜಯನಗರ ಠಾಣೆಯಲ್ಲಿ ದೂರು ದಾಖಲಾಗಿದೆ, ಬಿಜೆಪಿ ಯುವ ಮೋರ್ಚಾದ 25ಕ್ಕೂ ಹೆಚ್ಚು ಕಾರ್ಯಕರ್ತರು ಸೇರಿದಂತೆ ಮುಖಂಡರಾದ ದೀನ್ ದಯಾಳು, ರಾಹುಲ್ ಬಿದರೆ, ಪುರುಷೋತ್ತಮ, ಮಿಳ್ಳಗಟ್ಟ ಜಗ್ಗ, ಹೊಳಲೂರು ಸಂತೋಷ್ ಮುಂತಾದವರ ಮೇಲೆ ದೂರು ದಾಖಲಾಗಿದೆ.
ಕಾಂಗ್ರೆಸ್ ಕಚೇರಿಯ ಫ್ಲೆಕ್ಸ್ ಹರಿದು ಮುತ್ತಿಗೆ ಹಾಗೂ ಮೊಟ್ಟೆ ಎಸೆತ ಸಂಬಂಧ ದೂರು ದಾಖಲಾಗಿದ್ದ ಇನ್ನು ಹಲವರ ವಿರುದ್ದ ಸಿಸಿಟಿವಿ ಪರಿಶೀಲನೆ ನಡೆಸಿ ದೂರು ದಾಖಲಿಸಲು ಪೊಲೀಸರ ನಿರ್ಧಾರಿಸಿದ್ದಾರೆ.

