ಕಾಂಗ್ರೆಸ್ ಗೆ ಬೇಕಾಗಿರುವುದೇ ಸಂಘರ್ಷ ಕಾಂಗ್ರೆಸ್ ನವರು ಬೇಜವಬ್ದಾರಿತನದಿಂದ ವರ್ತನೆ ಮಾಡಿದ್ದಾರೆ, ಪ್ರಿಯಾಂಕ್ ಖರ್ಗೆ ಇಂತಹ ಘಟನೆಯನ್ನು ಕೇವಲವಾಗಿ ನೋಡುತ್ತಿದ್ದಾರೆ
ಬೆಂಗಳೂರಿನಲ್ಲಿ ಪ್ರತಿಭಟನೆ ವೇಳೆ ಬಸ್ ನಲ್ಲಿದ್ದಂತಹ ನಮ್ಮ ಮೇಲೂ ಹಲ್ಲೆ ಯತ್ನ ನಡೆಯಿತು ಎಂದು ಶಿವಮೊಗ್ಗ ನಗರ ಶಾಸಕ ಚನ್ನಬಸಪ್ಪ ಸುದ್ದಿಗೋಷ್ಟಿಯಲ್ಲಿ ತಿಳಿಸಿದರು
ಪೊಲೀಸರ ಬಂದೋ ಬಸ್ತ್ ನಲ್ಲಿ ನಾವು ಇದ್ದೆವು ಪೊಲೀಸರ ಬಂಧನದಲ್ಲಿದ್ದ ನಮಿಗೆ ಸುರಕ್ಷಿತವಾಗಿ ಇರಲು ಆಗಲಿಲ್ಲ
ಇದರ ಹೊಣೆ ಪ್ರಿಯಾಂಕ್ ಖರ್ಗೆ ಹೋರಬೇಕಾಗಿದೆ
ನಿನ್ನೆ ಶಿವಮೊಗ್ಗದಲ್ಲಿ ಬಿಜೆಪಿ ಕಚೇರಿಗೆ ಪೋಲಿಸ್ ರಕ್ಷಣೆ ಸರಿಯಾಗಿ ಇರಲಿಲ್ಲ
ಕಾಂಗ್ರೆಸ್ ಕಚೇರಿಗೆ ದೂರದಲ್ಲೇ ಬ್ಯಾರಿಕೇಡ್ ಹಾಕಿ ಬಂದೋಬಸ್ತ್ ಮಾಡಲಾಗಿತ್ತು, ಇದು ಪ್ರಿಯಾಂಕ್ ಖರ್ಗೆ ಸೂಚನೆ ಮೇರೆಗೆ ನಡೆದಿದೆ ಎಂದು ಶಾಸಕ ಚನ್ನಬಸಪ್ಪ ಗಂಭೀರವಾಗಿ ಆರೋಪಿಸಿದ್ದಾರೆ.
ಈ ಸರ್ಕಾರದಲ್ಲಿ ಪೊಲೀಸರ ರಕ್ಷಣಾ ವ್ಯವಸ್ಥೆಯನ್ನು ಪ್ರಶ್ನೆ ಮಾಡುವಂತಾಗಿದೆ, ಪ್ರಿಯಾಂಕ್ ಖರ್ಗೆ ಬಾಲಿಶವಾಗಿ ವರ್ತನೆ ತೋರಿದ್ದಾರೆ ಬಿಜೆಪಿ ಶಾಸಕರ ಕಾರಿನಲ್ಲಿ ನಾಡಬಾಂಬ್ ಹಾಗೂ ಲಾಂಗ್ ಇರಿಸಿದ್ದಾರೆಂದು ಬಾಲಿಶವಾಗಿ ಹೇಳಿಕೆ ನೀಡಿದ್ದಾರೆ,
ನಾವು ಪೊಲೀಸರ ಬಸ್ ನಲ್ಲಿ ಇದ್ದವರು ಹಾಗಾಗಿ ಅವೆಲ್ಲಾ ಹೇಗೆ ತರಲು ಸಾಧ್ಯ ಪ್ರಿಯಾಂಕ್ ಖರ್ಗೆ ಬಾಲಿಶವಾಗಿ ಹೇಳಿಕೆ ನೀಡಿದ್ದಾರೆ.
ಅವರ ಹೇಳಿಕೆಗೆ ಅಷ್ಟು ಮಹತ್ವ ನೀಡುವ ಅಗತ್ಯವಿಲ್ಲ ಎಂದು ತಿಳಿಸಿದರು.

