Home ಅಪರಾಧ ಮೇಕೆ ಕಳ್ಳತನ ಪ್ರಕರಣ ಭೇದಿಸಿದ ಪೊಲೀಸರು; ಆರೋಪಿ ಬಂಧನ, 5 ಮೇಕೆಗಳು ವಶ

ಮೇಕೆ ಕಳ್ಳತನ ಪ್ರಕರಣ ಭೇದಿಸಿದ ಪೊಲೀಸರು; ಆರೋಪಿ ಬಂಧನ, 5 ಮೇಕೆಗಳು ವಶ

by Mahesh malenaadu

ಶಿವಮೊಗ್ಗ : ಭದ್ರಾವತಿ

ಪೇಪರ್ ಟೌನ್ ಪೊಲೀಸ್ ಠಾಣೆ ವ್ಯಾಪ್ತಿಯ ಬಾರಂದೂರಿನಲ್ಲಿ ನಡೆದಿದ್ದ ಮೇಕೆ ಕಳ್ಳತನ ಪ್ರಕರಣವನ್ನು ಪೇಪರ್ ಟೌನ್ ಪೊಲೀಸರು ಯಶಸ್ವಿಯಾಗಿ ಭೇದಿಸಿದ್ದು, ಆರೋಪಿಯನ್ನು ಬಂಧಿಸಿ, ಸುಮಾರು 70 ಸಾವಿರ ರೂ. ಮೌಲ್ಯದ 5 ಮೇಕೆಗಳನ್ನು ವಶಪಡಿಸಿಕೊಂಡಿದ್ದಾರೆ.
​ತಿಮ್ಲಾಪುರ ತಾಂಡಾ ನಿವಾಸಿ ರವಿಕುಮಾರ್ ಯಾನೆ ಕುಂಟ ರವಿ ಬಂಧಿತ ಆರೋಪಿ.
​ಬಾರಂದೂರಿನನಲ್ಲಿ ಮನಿಯ ಎಂಬುರಿಗೆ ಸೇರಿದ, 90 ಸಾವಿರ ರೂಪಾಯಿ ಮೌಲ್ಯದ 6 ಮೇಕೆಗಳು ಇತ್ತೀಚೆಗೆ ಕಳ್ಳತನವಾಗಿದ್ದವು. ಈ ಸಂಬಂಧ ಪೇಪರ್ ಟೌನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
​ಪ್ರಕರಣದ ತನಿಖೆ ಕೈಗೆತ್ತಿಕೊಂಡ ಪೇಪರ್ ಟೌನ್ ಪೊಲೀಸ್ ಠಾಣೆಯ ಪಿಎಸ್‌ಐ ಕುಮಾರ್ ಎನ್. ಅವರ ಮಾರ್ಗದರ್ಶನದಲ್ಲಿ ವಿಶೇಷ ತಂಡವನ್ನು ರಚಿಸಲಾಗಿತ್ತು. ತಂಡದಲ್ಲಿದ್ದ ಎಎಸ್ಐ ಕುಮಾರ್, ಕ್ರೈಮ್ ವಿಭಾಗದ ಸಿಬ್ಬಂದಿಗಳಾದ ನಾಗರಾಜ್, ಬಸವರಾಜ್ ಮತ್ತು ಭರತ್ ಅವರನ್ನೊಳಗೊಂಡ ತಂಡವು ಭರ್ಜರಿ ಕಾರ್ಯಾಚರಣೆ ನಡೆಸಿ, ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದೆ.
​ಬಂಧಿತನಿಂದ ಸುಮಾರು 70,000 ರೂ. ಮೌಲ್ಯದ 5 ಮೇಕೆಗಳನ್ನು ವಶಪಡಿಸಿಕೊಳ್ಳಲಾಗಿದೆ‌.

Spread the love

You may also like

Leave a Comment