Home Uncategorized ಸಾಗರ ಬಳಿ ಟೆಂಪೋ ಪಲ್ಟಿ, ರಸ್ತೆ ತುಂಬಾ ಚೆಲ್ಲಾಪಿಲ್ಲಿಯಾದ ಟೊಮೆಟೊ

ಸಾಗರ ಬಳಿ ಟೆಂಪೋ ಪಲ್ಟಿ, ರಸ್ತೆ ತುಂಬಾ ಚೆಲ್ಲಾಪಿಲ್ಲಿಯಾದ ಟೊಮೆಟೊ

by Mahesh malenaadu

ಸಾಗರ: ಚಾಲಕನ ನಿಯಂತ್ರಣ ತಪ್ಪಿ ಟೆಂಪೋ ವಾಹನ ಪಲ್ಟಿಯಾಗಿದ್ದು, ಸಾವಿರ ರೂ ಮೌಲ್ಯದ ಟೊಮೆಟೊ ಹಣ್ಣುಗಳು ರಸ್ತೆಪಾಲಾದ ಘಟನೆ ತಾಲೂಕಿನ ಉಳ್ಳೂರು ಗ್ರಾಮದ ಸಮೀಪ ರಾಷ್ಟ್ರೀಯ ಹೆದ್ದಾರಿಯಲ್ಲಿ ನಡೆದಿದೆ.
ಅಪಘಾತದ ತೀವ್ರತೆಗೆ ಟೆಂಪೋದಲ್ಲಿದ್ದ ಟೊಮೆಟೊ ಬಾಕ್ಸ್‌ಗಳು ರಸ್ತೆಯುದ್ದಕ್ಕೂ ಚೆಲ್ಲಿ ನಜ್ಜುಗುಜ್ಜಾಗಿದ್ದರೂ, ಅದೃಷ್ಟವಶಾತ್ ಚಾಲಕ ಹಾಗೂ ನಿರ್ವಾಹಕ ಯಾವುದೇ ಗಾಯಗಳಿಲ್ಲದೆ ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಚಾಲಕನಿಗೆ ನೆರವಾದ ತಹಶೀಲ್ದಾರ್ ಡಾ. ಪ್ರತಿಭಾ ಆರ್.
ವಿಷಯ ತಿಳಿಯುತ್ತಿದ್ದಂತೆಯೇ ಸ್ಥಳಕ್ಕೆ ಭೇಟಿ ನೀಡಿದ ಸಾಗರ ತಹಶೀಲ್ದಾರ್ ಡಾ. ಪ್ರತಿಭಾ ಆರ್. ಅವರು ಪರಿಶೀಲನೆ ನಡೆಸಿ ಅಪಘಾತದ ಆಘಾತದಲ್ಲಿದ್ದ ಟ್ರಕ್ ಚಾಲಕನಿಗೆ ಸಾಂತ್ವನ ಹೇಳಿದ ಅವರು, ಧೈರ್ಯ ತುಂಬುವ ಕೆಲಸ ಮಾಡಿದರು.

Spread the love

You may also like

Leave a Comment