Home ಅಪರಾಧ ರಾತ್ರೋರಾತ್ರಿ ನೂರಾರು ಅಡಿಕೆ ಮರಗಳು ನೆಲಸಮ ಮಾಡಿದ ದುಷ್ಕರ್ಮಿಗಳು.

ರಾತ್ರೋರಾತ್ರಿ ನೂರಾರು ಅಡಿಕೆ ಮರಗಳು ನೆಲಸಮ ಮಾಡಿದ ದುಷ್ಕರ್ಮಿಗಳು.

by Mahesh malenaadu

 

ಶಿಕಾರಿಪುರ: ಶಿವಮೊಗ್ಗ ಜಿಲ್ಲೆ ಶಿಕಾರಿಪುರ ತಾಲೂಕಿನ ತಾಳಗುಂದ ಹೋಬಳಿಯ ಬಳ್ಳಿಗಾವಿ ಗ್ರಾಮದಲ್ಲಿ ಸರ್ವೆ ನಂ. 105 ರಲ್ಲಿ 3-15 ಭೂ ನ್ಯಾಯಮಂಡಳಿಯ ಆದೇಶದಂತೆ ಮಂಜೂರಾತಿಯಾಗಿದ್ದ ಜಮೀನಿನಲ್ಲಿ ಬೆಳೆಯಲಾಗಿದ್ದ 450 ಅಡಿಕೆ ಮರಗಳನ್ನು ದುಷ್ಕರ್ಮಿಗಳು ಕತ್ತರಿಸಿ ಹಾಕಿದ್ದಾರೆ.

ಜಗದೀಶ್ ಎಂಬುವವರ ಜಮೀನಿನಲ್ಲಿ 4-5 ವರ್ಷಗಳಿಂದ ಬೆಳೆಯಲಾಗಿದ್ದ 450 ಅಡಿಕೆ ಮರಗಳು ಕಿರಾತಕರು ರಾತ್ರೊ ರಾತ್ರಿ ಕಡಿದು ಹಾಕಿದ್ದು ಲಕ್ಷಾಂತರ ರೂಪಾಯಿಗಳ ನಷ್ಟ ಉಂಟಾಗಿದೆ ಎಂದು ಜಮೀನ ಮಾಲಿನ ಜಗಧೀಶ್ ಕುಟುಂಬ ಆರೋಪಿಸಿದೆ.

ಈ ವಿಚಾರವಾಗಿ ಗ್ರಾಮದ ನಾಗರಾಜ, ರಾಜು, ಚಿನ್ನಪ್ಪ, ವಿರುಪಾಕ್ಷಪ್ಪ, ಕರಿಬಸಪ್ಪ ಹಾಗೂ ಹಲವರ ವಿರುದ್ಧ ದೂರು ದಾಖಲಿಸಲಾಗಿದ್ದು,

ಹಲವಾರು ವರ್ಷಗಳಿಂದ ನಮಗೆ ನಮ್ಮ ಜಾಗದಲ್ಲಿ ಉಳುಮೆ ಮಾಡಲು ತೊಂದರೆ ಮಾಡುತ್ತಿದ್ದಾರೆಂದು ಆರೋಪಿಸಲಾಗಿದೆ, ಉಳುಮೆ ಮಾಡುವ ವೇಳೆ ಹಲವಾರು ಬಾರಿ ಬಂದು ತೊಂದರೆ ಉಂಟು ಮಾಡಿದ್ದಾರೆ, ಗೇಣಿ ಕಾಯ್ದೆಯಡಿ ನಮ್ಮ ಹೆಸರಿಗಿರುವ ಜಮೀನನ್ನು ಪರಭಾರೆ ಮಾಡಿಕೊಳ್ಳಲು ಸಂಚು ರೂಪಿಸಲಾಗಿದೆ, ಈ ವಿಚಾರವಾಗಿ ಸಿವಿಲ್ ನ್ಯಾಯಾಲಯದಲ್ಲಿ ಪ್ರಕರಣ ಇದ್ದರೂ ಕೂಡ ಪದೇ, ಪದೇ ತೊಂದರೆ ನೀಡುತ್ತಿದ್ದಾರೆಂದು ಆರೋಪಿಸಲಾಗಿದೆ.

ಅಡಿಕೆ ಮರಗಳನ್ನು ನಾಶ ಮಾಡಿದ ಆರೋಪಿಗಳ ವಿರುದ್ಧ ಕ್ರಮಕ್ಕೆ ಆಗ್ರಹಿಸಿದ ಜಗದೀಶ್ ಹಾಗೂ ಕುಟುಂಬ, ನಮಗೆ ನ್ಯಾಯ ಕೊಡಿಸಬೇಕೆಂದು ಜಗಧೀಶ್ ಮತ್ತು ಕುಟುಂಬ ರೈತರ ನಾಯಕರಲ್ಲಿ ಮನವಿ ಮಾಡಿಕೊಂಡಿದ್ದಾರೆ.

ಕಷ್ಟಪಟ್ಟು ಬೆಳೆಯಲಾಗಿದ್ದ ಅಡಿಕೆ ಮರಗಳನ್ನು ಕಡಿದು ನಷ್ಟ ಉಂಟು ಮಾಡಿರುವುದಕ್ಕೆ ಆರೋಪಿಗಳನ್ನು ಬಂಧಿಸಿ ನ್ಯಾಯ ಕೊಡಿಸಬೇಕೆಂದು ಕೇಳಿಕೊಂಡಿದ್ದಾರೆ.

Spread the love

You may also like

Leave a Comment