Home ಅಪರಾಧ ಅಸ್ವಸ್ಥಗೊಂಡು ಕಿವುಡ ಮತ್ತು ಮೂಗರ ವಸತಿ ಶಾಲೆಯ ವಿದ್ಯಾರ್ಥಿನಿ ಸಾವು

ಅಸ್ವಸ್ಥಗೊಂಡು ಕಿವುಡ ಮತ್ತು ಮೂಗರ ವಸತಿ ಶಾಲೆಯ ವಿದ್ಯಾರ್ಥಿನಿ ಸಾವು

by Mahesh malenaadu

​ಶಿವಮೊಗ್ಗ : ಭದ್ರಾವತಿಯ ಮಾಚೇನಹಳ್ಳಿಯಲ್ಲಿರುವ ಕಿವುಡ ಮತ್ತು ಮೂಗರ ವಸತಿ ಶಾಲೆಯ 8ನೇ ತರಗತಿ ವಿದ್ಯಾರ್ಥಿನಿ ಅಕ್ಷರ (14) ದಿಢೀರ್ ಅಸ್ವಸ್ಥಗೊಂಡು ಮೃತಪಟ್ಟಿದ್ದಾಳೆ.

​ಶಿಕಾರಿಪುರ ಹಾಗೂ ಆನಂದಪುರದ ನಡುವಿನ ಅಣ್ಣಪ್ಪನಹಟ್ಟಿ ಗ್ರಾಮದ ನಿವಾಸಿಯಾದ ಈಕೆಯನ್ನು ಕಳೆದ ಶುಕ್ರವಾರವಷ್ಟೇ ವಸತಿ ಶಾಲೆಗೆ ಸೇರಿಸಲಾಗಿತ್ತು. ಶಾಲೆಯಲ್ಲಿದ್ದಾಗ ಏಕಾಏಕಿ ತಲೆತಿರುಗಿ ಕುಸಿದುಬಿದ್ದ ವಿದ್ಯಾರ್ಥಿನಿಯನ್ನು ಸಿಬ್ಬಂದಿ ತಕ್ಷಣ ಸಮೀಪದ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲು ಯತ್ನಿಸಿದರು. ಆದರೆ, ಚಿಕಿತ್ಸೆ ಫಲಕಾರಿಯಾಗದೆ ಆಕೆ ಮೃತಪಟ್ಟಿದ್ದಾಳೆ. ಈ ಕುರಿತು ಭದ್ರಾವತಿ ನ್ಯೂಟೌನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Spread the love

You may also like

Leave a Comment