ಸಾಗರ: ಶಿವಮೊಗ್ಗ ಜಿಲ್ಲೆಯ ಸಾಗರ ಪಟ್ಟಣದಲ್ಲಿ ಹೃದಯ ವಿದ್ರಾವಕ ಘಟನೆಯೊಂದು ನಡೆದಿದೆ
ಸಾಗರ ಪಟ್ಟಣದ ಶ್ರೀಧರ ನಗರ ಬಡಾವಣೆಯ9 ನೇ ತರಗತಿಯಲ್ಲಿ ಓದುತಿದ್ದ ಆಕಾಶ್ ಮನೆಯಲ್ಲಿ ಯಾರು ಇಲ್ಲದ ಸಮಯದಲ್ಲಿ ನೇಣಿಗೆ ಶರಣಾಗಿರುವ ಘಟನೆ ನಡೆದಿದೆ. ತೀವ್ರ ಸೊಂಟದ ನೋವನ್ನು ತಾಳಲಾರದೆ ಯುವಕ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆಂದು ಹೇಳಲಾಗುತ್ತಿದ್ದು.
ಆಕಾಶ್ ಸಾಗರದ ಸಿದ್ದೇಶ್ವರ ಸರ್ಕಾರಿ ಪ್ರೌಢ ಶಾಲೆಯಲ್ಲಿ 9ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದು ಕೆಲ ದಿನಗಳ ಹಿಂದೆ ನಲ್ಲಿಯಿಂದ ನೀರು ತರಲು ಹೋದ ವೇಳೆ ಆಕಸ್ಮಿಕವಾಗಿ ಜಾರಿಬಿದ್ದಿದ್ದಾನೆ ಈ ವೇಳೆ ಆಕಾಶ್ ಸೊಂಟಕ್ಕೆ ತೀವ್ರ ಪೆಟ್ಟು ಬಿದ್ದಿತ್ತು, ಅಂದಿನಿಂದಲೂ ತೀವ್ರ ಸೊಂಟ ನೋವಿನಿಂದ ಬಳಲುತ್ತಿದ್ದ ಬಾಲಕ ಆಕಾಶ್
ನಾಳೆ ಮಂಗಳವಾರದಿಂದ ಶಾಲೆಗೆ ತೆರಳುವುದಾಗಿ ತಿಳಿಸಿದ್ದ. ಆದರೆ ಅತಿಯಾದ ನೋವಿನ ಯಾತನೆ ತಾಳಲಾರದ ಆಕಾಶ್ ಮನೆಯಲ್ಲಿ ಯಾರು ಇಲ್ಲದ ಸಮಯದಲ್ಲಿ ಈ ತೀರ್ಮಾನ ತೆಗೆದುಕೊಂಡಿದ್ದಾನೆ ಎಂದು ಪೊಲೀಸರಿಗೆ ನೀಡಿರುವ ದೂರಿನಲ್ಲಿ ಆಕಾಶ್ ಪೋಷಕರು ತಿಳಿಸಿದ್ದಾರೆ.
ಘಟನೆ ಕುರಿತು ಸಾಗರ ಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

