170
ಸಾಗರ:ಶಿವಮೊಗ್ಗ ಜಿಲ್ಲೆ ಸಾಗರ ಟೌನಿನ ಎಸ್.ಎನ್.ನಗರದ ಸಂತೆ ಮಾರುಕಟ್ಟೆ ಬಳಿ ದಾಳಿ ನಡೆಸಿದ ಪೊಲೀಸರು ಖಚಿತ ಮಾಹಿತಿ ಆಧರಿಸಿ ಮಾದಕ ವಸ್ತು ಮಾರಾಟಗಾರರನ್ನು ಬಂದಿಸಲು ಖೆಡ್ಡಾ ತೋಡಿದ್ದರು,
ಈ ಕಾರ್ಯಾಚರಣೆಯಲ್ಲಿ ಹಫೀಜ್ ಉರ್ ರೆಹಮಾನ್ (27)
ಎಂಬ ಆರೋಪಿಯನ್ನು ಬಂಧಿಸಲಾಗಿದ್ದು,
ಆರೋಪಿಯಿಂದ 20,000 ರೂ. ಮೌಲ್ಯದ 6 ಗ್ರಾಂ 77 ಮಿಲಿ ಗ್ರಾಂ MDMA ಮಾದಕ ವಸ್ತು ಜಪ್ತಿ ಮಾಡಿ ವಶಕ್ಕೆ ಪಡೆದ ಸಾಗರ ಟೌನ್ ಠಾಣೆಯ ಪಿಎಸ್‌ಐ ಮತ್ತು ಸಿಬ್ಬಂದಿಯವರ, ಆರೋಪಿ ವಿರುದ್ಧ ಎನ್.ಡಿ.ಪಿ.ಎಸ್ ಕಾಯ್ದೆಯಡಿ ಕೇಸ್ ದಾಖಲಿಸಿದ್ದಾರೆ.
ಬಂಧಿತ ಆರೋಪಿಯನ್ನು ತೀವ್ರ ವಿಚಾರಣೆ ಒಳಪಡಿಸಿ ಮಾದಕ ವಸ್ತು ನೆಟ್‌ವರ್ಕ್ ಬೆನ್ನತ್ತಿದ ಸಾಗರ ಪೊಲೀಸರು, ಪ್ರಕರಣ ದಾಖಲಿಸಿಕೊಂಡು ತನಿಖೆ ಚುರುಕುಗೊಳಿಸಿದ್ದಾರೆ.

