Home ದೇಶ-ವಿದೇಶ ಪ್ರಕೃತಿ ವಿಕೋಪಕ್ಕೆ ಒಳಗಾದ ನೇಪಾಳಕ್ಕೆ ಕರ್ನಾಟಕ ರಕ್ಷಣಾ ವೇದಿಕೆ ಸ್ವಾಭಿಮಾನಿ ಬಣದ ಸಹಾಯ ಹಸ್ತ

ಪ್ರಕೃತಿ ವಿಕೋಪಕ್ಕೆ ಒಳಗಾದ ನೇಪಾಳಕ್ಕೆ ಕರ್ನಾಟಕ ರಕ್ಷಣಾ ವೇದಿಕೆ ಸ್ವಾಭಿಮಾನಿ ಬಣದ ಸಹಾಯ ಹಸ್ತ

by Mahesh malenaadu

ಶಿವಮೊಗ್ಗ: ನಮ್ಮ ನೆರೆಯ ದೇಶವಾದ ನೇಪಾಳವು ಎಂದು ಕಾಣದಂತಹ ಹಠಾತ್ ಪ್ರಕೃತಿ ವಿಕೋಪಕ್ಕೆ ತುತ್ತಾಗಿ ಸಾವಿರಾರು ಕುಟುಂಬಗಳು ಮನೆ-ಮಠಗಳನ್ನು ಕಳೆದುಕೊಂಡು ಪ್ರವಾಸಕ್ಕೆ ತೆರಳಿದ್ದ. ಕನ್ನಡಿಗರು ಸೇರಿದಂತೆ ನೂರಾರು ಜನ ಜೀವಗಳನ್ನು ಕಳೆದುಕೊಂಡಿದ್ದಾರೆ. ಹಾಗೂ ನೂರಾರು ಜನರು ನಾಪತ್ತೆಯಾಗಿದ್ದಾರೆ. ಭೋಟೆ ಕೋಶಿ ನದಿಯ ಪ್ರವಾಹಕ್ಕೆ ಒಳಗಾಗಿ ಜೀವಗಳನ್ನು ಕಳೆದುಕೊಂಡಿರುವಂತಹ ಎಲ್ಲಾ ಕುಟುಂಬಗಳಿಗೆ ಕರ್ನಾಟಕ ರಕ್ಷಣಾ ವೇದಿಕೆ ಸ್ವಾಭಿಮಾನಿ ಬಣ ಶಿವಮೊಗ್ಗ ಘಟಕವು ಸಂತಾಪ ಸೂಚಿಸುತ್ತದೆ.

ಅಲ್ಲದೇ ಸಂಕಷ್ಟಕ್ಕೆ ಸಿಲುಕಿರುವ ನೇಪಾಳಕ್ಕೆ ಭಾರತ ದೇಶವು ಸಹಾಯ ಹಸ್ತ ಚಾಚಿದೆ. ಮಾನವೀಯ ನೆಲೆಗಟ್ಟಿನಲ್ಲಿ ಕರ್ನಾಟಕ ರಕ್ಷಣಾ ವೇದಿಕೆ ಸ್ವಾಭಿಮಾನಿ ಬಣ ಸಹ ಸಂಕಷ್ಟಕ್ಕೆ ಒಳಗಾಗಿರುವ ನೇಪಾಳಕ್ಕೆ ಜಿಲ್ಲಾಧಿಕಾರಿಗಳ ಮುಖಾಂತರ ಪ್ರಧಾನ ಮಂತ್ರಿ ಪರಿಹಾರ ನಿಧಿಗೆ ಹತ್ತುಸಾವಿರ ರೂಪಾಯಿಗಳನ್ನು ಡಿಡಿ ರೂಪದಲ್ಲಿ ಜಿಲ್ಲಾಧಿಕಾರಿಗಳ ಮುಖಾಂತರ ಪ್ರಧಾನಮಂತ್ರಿ ಪರಿಹಾರ ನಿಧಿಗೆ ಸಲ್ಲಿಸಿತು.

ಈ ಸಂದರ್ಭದಲ್ಲಿ ವೇದಿಕೆಯ ಜಿಲ್ಲಾಧ್ಯಕ್ಷರಾದ ಹೆಚ್.ಎಸ್. ಕಿರಣ್ ಕುಮಾರ್, ಜಿಲ್ಲಾ ಉಪಾಧ್ಯಕ್ಷರುಗಳಾದ ಸೈಯದ್ ಮುಜಿಬುಲ್ಲಾ, ವಿಜಯ್ ಕುಮಾರ್, ಗಂಗಾಧರ, ಜಿಲ್ಲಾ ಮಹಾ ಪ್ರಧಾನ ಕಾರ್ಯದರ್ಶಿಗಳಾದ ಮಹಮ್ಮದ್ ಶಫಿ, ಜಿಲ್ಲಾ ಪ್ರದಾನ ಕಾರ್ಯದರ್ಶಿ ನಾಗರಾಜ್, ಜಿಲ್ಲಾ ಕಾರ್ಯದರ್ಶಿ ಕರವೇ ಸಾದಿಕ್, ಜಿಲ್ಲಾ ಸಂ. ಸಹಕಾರ್ಯದರ್ಶಿ ನೂರುಲ್ಲಾಖಾನ್, ಕೇಶವ, ಅನ್ಸರ್ ಅಹಮ್ಮದ್ ಮಹಿಳಾ ಅಧ್ಯಕ್ಷರಾದ ಕವಿತಾ ಸಿ., ಉಪಾಧ್ಯಕ್ಷರಾದ ಪದ್ಮಾ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಆರತಿ ತಿವಾರಿ, ಜಿಲ್ಲಾ ಗೌರವಾಧ್ಯಕ್ಷರು ಪದ್ಮಮ್ಮ ಟಿ.ಎಸ್., ನಗರಾಧ್ಯಕ್ಷರಾದ ಗೀತ ಎಂ. ಅನುಪಮ ರೋಜಲಿನ್, ಶ್ರೀಮತಿj ಶೋಭಾ ಬಿ.ಹೆಚ್., ಸರಿತಾ ಕೆ.ಬಿ. ಮುಂತಾದ ಪದಾಧಿಕಾರಿಗಳು, ಕಾರ್ಯಕರ್ತರು ಉಪಸ್ಥಿತರಿದ್ದರು

Spread the love

You may also like

Leave a Comment