Home Uncategorized ಕೊಡಚಾದ್ರಿ ಚಾರಣಕ್ಕೆ ಬಂದಿದ್ದ ಯುವಕನಿಗೆ ಹಾರ್ಟ್ ಅಟ್ಯಾಕ್ !

ಕೊಡಚಾದ್ರಿ ಚಾರಣಕ್ಕೆ ಬಂದಿದ್ದ ಯುವಕನಿಗೆ ಹಾರ್ಟ್ ಅಟ್ಯಾಕ್ !

by Mahesh malenaadu

ಇಂದು ಅಂದರೆ ಶನಿವಾರ ಮುಂಜಾನೆ ಕೊಡಚಾದ್ರಿ ಬೆಟ್ಟಕ್ಕೆ ಚಾರಣಕ್ಕೆ ಹೊರಡಬೇಕಿದ್ದ ಯುವಕ ಭಾನುವಾರ ರಾತ್ರಿ ತನ್ನ ಸ್ನೇಹಿತನ ಮನೆಯಲ್ಲಿ ತಂಗಿದ್ದ ವೇಳೆ ಹೃದಯಾಘಾತದಿಂದ ಸಾವನ್ನಪ್ಪಿದ್ದಾನೆ.

ಹೊಸನಗರ ತಾಲೂಕಿನ ಪ್ರಸಿದ್ದ ಪ್ರವಾಸಿ ತಾಣವಾದ ಕೊಡಚಾದ್ರಿ ಬೆಟ್ಟದ ಬಳಿಯ ಸಂಪೆಕಟ್ಟೆಯ ಕಟ್ಟಿನಹೊಳೆ ಗ್ರಾಮದಲ್ಲಿ ಘಟನೆ ನಡೆದಿದೆ.

ಬೆಂಗಳೂರು ಮೂಲದ 28 ವರ್ಷದ ಶ್ರೀಕಾಂತ್ ಎಂಬ ಯುವಕ ಹೃದಯಾಘಾತದಿಂದ ಸಾವನ್ನಪ್ಪಿದ್ದು ನಿನ್ನೆ ತನ್ನ ಸ್ನೇಹಿತರೊಂದಿಗೆ ಟ್ರೆಕ್ಕಿಂಗ್ ಗೆ ಬಂದಿದ್ದ ಇಂದು ಮುಂಜಾನೆ ಕೊಡಚಾದ್ರಿ ಶಿಖರ ವೀಕ್ಷಣೆಗೆ ಹೊರಡ ಬೇಕಿದ್ದ ಯುವಕರು

ಆದರೆ ನಿನ್ನೆ ರಾತ್ರಿ ಶ್ರೀಕಾಂತ್ ಆರೋಗ್ಯದಲ್ಲಿ ಏರುಪೇರು ಉಂಟಾಗಿ ಸ್ನೇಹಿತನ ಮನೆಯಲ್ಲೆ ಕುಸಿದು ಬಿದ್ದಿದ್ದಾನೆ, ತಕ್ಷಣ ಜೊತೆಗೆ ಬಂದ ಸ್ನೇಹಿತರು ಶ್ರೀಕಾಂತ್ ನನ್ನು ಕೂಡಲೇ ಹೊಸನಗರ ಸರ್ಕಾರಿ ಆಸ್ಪತ್ರೆಗೆ ಕರೆತಂದಿದ್ದರು

ಶ್ರೀಕಾಂತ್ ಪರೀಕ್ಷೆ ನಡೆಸಿದ ವೈದ್ಯರಿಂದ ಹೃದಯಾಘಾತದಿಂದ ಸಾವನ್ನಪ್ಪಿರುವುದು ಧೃಡ ಪಟ್ಟಿದೆ.

Spread the love

You may also like

Leave a Comment