Home ಆರೋಗ್ಯ ಭದ್ರಾವತಿಯಲ್ಲಿ ಆಹಾರ ಸೇವಿಸಿ ಅಸ್ವಸ್ಥರಾಗಿದ್ದ 15ಕ್ಕೂ ಹೆಚ್ಚು ಶಾಲಾ ಮಕ್ಕಳು ಗುಣಮುಖ

ಭದ್ರಾವತಿಯಲ್ಲಿ ಆಹಾರ ಸೇವಿಸಿ ಅಸ್ವಸ್ಥರಾಗಿದ್ದ 15ಕ್ಕೂ ಹೆಚ್ಚು ಶಾಲಾ ಮಕ್ಕಳು ಗುಣಮುಖ

by Mahesh malenaadu

ಶಿವಮೊಗ್ಗ : ಜಿಲ್ಲೆಯ ಭದ್ರಾವತಿ ತಾಲೂಕು ವೇಲೂರು ಶೆಡ್ ನಲ್ಲಿ ನಡೆದ ತಿಥಿ ಊಟ ಸೇವಿಸಿ ಅಸ್ವಸ್ತರಾಗಿ ನಿನ್ನೆ ಆಸ್ಪತ್ರೆಗೆ ದಾಖಲಾಗಿದ್ದ ಮಕ್ಕಳು ಚೇತರಿಕೆ ಆಗಿದ್ದಾರೆ.

​ಅಸ್ವಸ್ಥಗೊಂಡಿದ್ದ ನ್ಯೂಟೌನ್ ತರಂಗ ಶಾಲೆಯ ವಸತಿ ನಿಲಯದ ವಿದ್ಯಾರ್ಥಿಗಳ ಊಟ ಮಾಡಿದ್ದ 7-8 ಸಾರ್ವಜನಿಕರೂ ಕೂಡ ಅಸ್ವಸ್ಥರಾಗಿದ್ದರು.

​ಆಹಾರ ಸೇವನೆಯೇ ನಂತರ ಎಲ್ಲರಲ್ಲು ವಾಂತಿ ಭೇದಿ ಕಂಡು ಬಂದಿದ್ದು ಫುಡ್ ಪಾತಿಸನ್ ಆಗಿರುವ ಶಂಕೆ ವ್ಯಕ್ತವಾಗಿದೆ. ​ಅದೃಷ್ಟವಶಾತ್‌ ಅಪಾಯತಪ್ಪಿದ್ದು, ಚಿಕಿತ್ಸೆ ಬಳಿಕ ಮಕ್ಕಳು ಚೇತರಿಸಿಕೊಳ್ಳುತ್ತಿದ್ದಾರೆ.

​ಸ್ಥಳೀಯರು ಮತ್ತು ಸಂಬಂಧಿಕರಿಗೂ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದ್ದು ​ಆಹಾರದ ಸ್ಯಾಂಪಲ್ ಪರೀಕ್ಷೆಗೆ ರವಾನಿಸ ಲಾಗಿದೆ, ಇನ್ನು ಆಹಾರ ಗುಣಮಟ್ಟ ಇಲಾಖೆ ತನಿಖೆ ಚುರುಕು ಗೊಳಿಸಿದೆ.

Spread the love

You may also like

Leave a Comment