Home ಅಪರಾಧ ಭದ್ರಾವತಿಯಲ್ಲಿ ಕುಟುಂಬ ಕಲಹಕ್ಕೆ ವ್ಯಕ್ತಿ ಬಲಿ, ಮನೆಯಲ್ಲಿ ನೇಣು ಬಿಗಿದುಕೊಂಡು ಸೆಂಟ್ರಿಂಗ್ ಕಾರ್ಮಿಕ ಆತ್ಮಹತ್ಯೆ

ಭದ್ರಾವತಿಯಲ್ಲಿ ಕುಟುಂಬ ಕಲಹಕ್ಕೆ ವ್ಯಕ್ತಿ ಬಲಿ, ಮನೆಯಲ್ಲಿ ನೇಣು ಬಿಗಿದುಕೊಂಡು ಸೆಂಟ್ರಿಂಗ್ ಕಾರ್ಮಿಕ ಆತ್ಮಹತ್ಯೆ

by Mahesh malenaadu

ಭದ್ರಾವತಿ: ಮನೆಯಲ್ಲಿ ಭಿನ್ನಾಭಿಪ್ರಾಯ ಹಾಗೂ ಮನಸ್ಸಿನ ಬೇಸರದಿಂದ 37 ವರ್ಷದ ವ್ಯಕ್ತಿಯೊಬ್ಬರು ಮನೆಯಲ್ಲೇ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿರುವ ಘಟನೆ ಭದ್ರಾವತಿಯ ದೇವರಾಜ ಅರಸು ಬಡಾವಣೆಯಲ್ಲಿ ನಡೆದಿದೆ.

​ಮೃತರನ್ನು ಸೆಂಟ್ರಿಂಗ್ ಕೆಲಸ ಮಾಡುತ್ತಿದ್ದ ಸುಶೀಲ್ ಕುಮಾರ್ (37) ಎಂದು ಗುರುತಿಸಲಾಗಿದೆ. ಕುಟುಂಬದಲ್ಲಿ ಉಂಟಾದ ಮನಸ್ತಾಪದಿಂದಾಗಿ ಪತ್ನಿ ಐದು ತಿಂಗಳ ಹಿಂದೆ ತವರು ಮನೆಗೆ ತೆರಳಿದ್ದರು. ಇದರಿಂದ ತೀವ್ರ ಮಾನಸಿಕ ಬೇಸರಕ್ಕೊಳಗಾಗಿದ್ದ ಸುಶೀಲ್, ಅತಿಯಾದ ಮದ್ಯದ ಚಟಕ್ಕೆ ಬಿದ್ದಿದ್ದರೆನ್ನಲಾಗಿದೆ.
​ಮನೆಯ ಮಲಗುವ ಕೋಣೆಯಲ್ಲಿ ಸೀಲಿಂಗ್ ಫ್ಯಾನ್‌ಗೆ ಬಟ್ಟೆಯಿಂದ ನೇಣು ಬಿಗಿದುಕೊಂಡಿದ್ದಾರೆ. ತಕ್ಷಣ ಅವರನ್ನು ಆಸ್ಪತ್ರೆಗೆ ಸಾಗಿಸಲಾಯಿತಾದರೂ, ಪರೀಕ್ಷಿಸಿದ ವೈದ್ಯರು ಮೃತಪಟ್ಟಿರುವುದಾಗಿ ಘೋಷಿಸಿದರು. ಮೃತರ ತಂದೆ ಕೃಪಯ್ಯ ನೀಡಿದ ದೂರಿನನ್ವಯ ಯಾವುದೇ ಅನುಮಾನವಿಲ್ಲವೆಂದು ತಿಳಿಸಲಾಗಿದ್ದು, ಭದ್ರಾವತಿ ಹಳೇನಗರ ಪೊಲೀಸ್ ಠಾಣೆಯಲ್ಲಿ ಅಸಹಜ ಸಾವು ಪ್ರಕರಣ ದಾಖಲಾಗಿದೆ.

Spread the love

You may also like

Leave a Comment