Home Uncategorized ಮಾನವೀಯತೆ ಮೆರೆದ ಕಾರ್ಗಲ್ ಪೊಲೀಸರು, ಸಂಕಷ್ಟದಲ್ಲಿದ್ದ ಕುಟುಂಬಕ್ಕೆ ಊರಿಗೆ ಮರಳಲು ನೆರವು!

ಮಾನವೀಯತೆ ಮೆರೆದ ಕಾರ್ಗಲ್ ಪೊಲೀಸರು, ಸಂಕಷ್ಟದಲ್ಲಿದ್ದ ಕುಟುಂಬಕ್ಕೆ ಊರಿಗೆ ಮರಳಲು ನೆರವು!

by Mahesh malenaadu

​ಶಿವಮೊಗ್ಗ : ಹಣಕಾಸಿನ ಅಭಾವದಿಂದ ತಮ್ಮ ಸ್ವಗ್ರಾಮಕ್ಕೆ ತೆರಳಲಾಗದೆ ಸಂಕಷ್ಟದಲ್ಲಿದ್ದ ಬಳ್ಳಾರಿ ಜಿಲ್ಲೆಯ ಬಡ ಕುಟುಂಬವೊಂದಕ್ಕೆ ಕಾರ್ಗಲ್ ಪೊಲೀಸರು ಸಾಥ್ ನೀಡುವ ಮೂಲಕ ಮಾನವೀಯತೆ ಮೆರೆದಿದ್ದಾರೆ.

​ಉದ್ಯೋಗ ಅರಸಿ ಶಿವಮೊಗ್ಗ ಜಿಲ್ಲೆಯ ಜೋಗಕ್ಕೆ ಬಂದಿದ್ದ ಈ ಕುಟುಂಬವು ಕಾಮಗಾರಿ ಮುಗಿದ ನಂತರ ಊರಿಗೆ ಮರಳಲು ಹಣವಿಲ್ಲದೆ ಪರದಾಡುತ್ತಿತ್ತು. ಈ ವಿಷಯ ತಿಳಿಯುತ್ತಿದ್ದಂತೆ ತಕ್ಷಣ ಸ್ಪಂದಿಸಿದ ಕಾರ್ಗಲ್ ಹಾಗೂ ಜೋಗ ಪೊಲೀಸ್ ಸಿಬ್ಬಂದಿ, ಕುಟುಂಬದ ಪರಿಸ್ಥಿತಿಯನ್ನು ವಿಚಾರಿಸಿ ಪ್ರಯಾಣಕ್ಕಾಗಿ ಅಗತ್ಯ ಹಣಕಾಸಿನ ನೆರವು ನೀಡಿ ಊರಿಗೆ ಕಳುಹಿಸಿಕೊಟ್ಟರು.
​ಸಮಯಕ್ಕೆ ಸರಿಯಾಗಿ ನೆರವಾದ ಪೊಲೀಸರ ಈ ಔದಾರ್ಯಕ್ಕೆ ಕುಟುಂಬಸ್ಥರು ಕಣ್ಣೀರಿಡುತ್ತ ಕೃತಜ್ಞತೆ ಸಲ್ಲಿಸಿದ್ದಾರೆ. ಪೊಲೀಸರ ಈ ಶ್ಲಾಘನೀಯ ಕಾರ್ಯಕ್ಕೆ ಸಾರ್ವಜನಿಕರಿಂದ ವ್ಯಾಪಕ ಮೆಚ್ಚುಗೆ ವ್ಯಕ್ತವಾಗಿದೆ.

Spread the love

You may also like

Leave a Comment