36
ಶಿವಮೊಗ್ಗ : ಮಲೆನಾಡು ಭಾಗದಲ್ಲಿ ಉತ್ತಮ ಮಳೆಯಾಗುತ್ತಿದ್ದು, ಶಿಕಾರಿಪುರ ತಾಲೂಕಿನ ರೈತರ ಜೀವನಾಡಿ ಎನಿಸಿರುವ ಅಂಬ್ಲಿಗೋಳ ಜಲಾಶಯ ಭರ್ತಿಯಾಗಿ ಕೋಡಿ ಬಿದ್ದಿದೆ. ಕೋಡಿ ಬಿದ್ದ ಹಿನ್ನೆಲೆಯಲ್ಲಿ ಸಂಸದ ಬಿ.ವೈ.ರಾಘವೇಂದ್ರ ಹಾಗೂ ಬಿಜೆಪಿ ರಾಜ್ಯಾಧ್ಯಕ್ಷ ಮತ್ತು ಶಾಸಕ ಬಿ.ವೈ.ವಿಜಯೇಂದ್ರ ಅವರು ಜಲಾಶಯಕ್ಕೆ ಸಾಂಪ್ರದಾಯಿಕ ಪೂಜೆ ಸಲ್ಲಿಸಿ ಬಾಗಿನ ಅರ್ಪಿಸಿದರು. ಈ ವೇಳೆ ಮಾತನಾಡಿದ ಸಂಸದ ಬಿ.ವೈ.ರಾಘವೇಂದ್ರ, ವರುಣನ ಕೃಪೆಯಿಂದ ಜಿಲ್ಲೆಯಲ್ಲಿ ಉತ್ತಮ ಮಳೆಯಾಗಿದೆ, ಮಳೆಯಾದ ಪರಿಣಾಮ ಅಂಬ್ಲಿಕೊಳ ಜಲಾಶಯ ಭರ್ತಿಯಾಗಿದೆ. ವರುಣನ ದಯೆಯಿಂದ
ಜಿಲ್ಲೆಯಲ್ಲಿ ಕೃಷಿ ಸಮೃದ್ಧಿ ಹೆಚ್ಚಲಿ, ಪ್ರತಿಯೊಬ್ಬ ರೈತ ಕುಟುಂಬದಲ್ಲೂ ಸುಖ, ಶಾಂತಿ ನೆಲೆಸಲಿ ಎಂದರು.

