Home Uncategorized ಸಚಿವ ಮಧು ಬಂಗಾರಪ್ಪಗೆ ಸ್ವಕ್ಷೇತ್ರ ಸೊರಬದಲ್ಲಿ ಅದ್ಧೂರಿ ಸ್ವಾಗತ ಕೋರಿದ ಶಾಲಾ ಮಕ್ಕಳು.

ಸಚಿವ ಮಧು ಬಂಗಾರಪ್ಪಗೆ ಸ್ವಕ್ಷೇತ್ರ ಸೊರಬದಲ್ಲಿ ಅದ್ಧೂರಿ ಸ್ವಾಗತ ಕೋರಿದ ಶಾಲಾ ಮಕ್ಕಳು.

by Mahesh malenaadu

ಶಿವಮೊಗ್ಗ , ಸೊರಬ: ಎರಡನೇ ಬಾರಿಗೆ ಸಚಿವರಾದ ಬಳಿಕ ಮೊದಲ ಬಾರಿಗೆ ಜಿಲ್ಲೆಗೆ ಆಗಮಿಸಿದ ಶಿಕ್ಷಣ ಸಚಿವ ಮಧು ಬಂಗಾರಪ್ಪ ಅವರಿಗೆ ಸ್ವಕ್ಷೇತ್ರ ಸೊರಬದಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಹಾಗೂ ಅಭಿಮಾನಿಗಳು ಅಭೂತಪೂರ್ವ, ಅದ್ಧೂರಿ ಸ್ವಾಗತ ಕೋರಿದರು.

​ಸೊರಬ ತಾಲೂಕಿನ ಛತ್ರದಹಳ್ಳಿ ಗಡಿಭಾಗಕ್ಕೆ ಆಗಮಿಸಿದ ಸಚಿವರನ್ನು ಪಟಾಕಿ ಸಿಡಿಸಿ, ಬೃಹತ್ ಹಾರ ಹಾಕಿ ಆತ್ಮೀಯವಾಗಿ ಬರಮಾಡಿಕೊಳ್ಳಲಾಯಿತು. ಈ ಶುಭ ಸಂದರ್ಭದಲ್ಲಿ ಶಾಲಾ ಮಕ್ಕಳು ಹಾಗೂ ಸಾವಿರಾರು ಸಂಖ್ಯೆಯಲ್ಲಿ ನೆರೆದಿದ್ದ ಪಕ್ಷದ ಕಾರ್ಯಕರ್ತರು ಸಚಿವರಿಗೆ ಪ್ರೀತಿಯ ಅಭಿನಂದನೆ ಸಲ್ಲಿಸಿದರು.
​ಸೊರಬ ಕ್ಷೇತ್ರದಲ್ಲಿ ಹಬ್ಬದ ವಾತಾವರಣ ನಿರ್ಮಾಣವಾಗಿದ್ದು, ನೆಚ್ಚಿನ ನಾಯಕನಿಗೆ ಹೂಮಳೆ ಸುರಿಸಿ ಜನರು ಸಂಭ್ರಮಿಸಿದರು. ಜನರ ಪ್ರೀತಿ ಮತ್ತು ಅಭಿಮಾನಕ್ಕೆ ಧನ್ಯವಾದ ಅರ್ಪಿಸಿದ ಸಚಿವರು, ಕ್ಷೇತ್ರದ ಅಭಿವೃದ್ಧಿಗೆ ಶ್ರಮಿಸುವುದಾಗಿ ಭರವಸೆ ನೀಡಿದರು.

Spread the love

You may also like

Leave a Comment