** ಕಲಬುರಗಿ ಕೇಂದ್ರ ಕಾರಾಗೃಹದಿಂದ ಮೂವರು ಸಜಾ ಕೈದಿಗಳು ಪರಾರಿ ವಿಚಾರ
ಶಿವಮೊಗ್ಗದಲ್ಲಿ ಮಾಜಿ ಗೃಹ ಸಚಿವ ಆರಗ ಜ್ಞಾನೇಂದ್ರ ಪ್ರತಿಕ್ರಿಯೆ
ಕೈದಿಗಳು ತಪ್ಪಿಸಿಕೊಂಡ ಸುದ್ದಿಯನ್ನು ಕೇಳಿ ದಿಗಿಲಾಯಿತು
ಜೈಲುಗಳನ್ನು ಸುಧಾರಿಸುವ ಅವಶ್ಯಕತೆ ಇದೆ, ನಾನು ಗೃಹ ಸಚಿವ ಆಗಿದ್ದಾಗ ಕೂಡ ಜೈಲಿನಲ್ಲಿ ಅಕ್ರಮಗಳು ನಡೆದಿದ್ವು ತಕ್ಷಣ ಜೈಲಾಧಿಕಾರಿಗಳು, ಸಿಬ್ಬಂದಿ ಮೇಲೆ ಕ್ರಮ ಕೈಗೊಂಡಿದ್ದೆ.
ಆದ್ರೆ ಕಳೆದ ಮೂರು ವರ್ಷದಿಂದ ಜೈಲು ಸುಧಾರಣೆ ಬಗ್ಗೆ ಕಾಂಗ್ರೆಸ್ ಸರ್ಕಾರ ತಲೆ ಕೆಡಿಸಿಕೊಂಡಿಲ್ಲ
ಕೈದಿಗಳು ಪರಾರಿಯಾಗಿರೋದು ಗೃಹ ಇಲಾಖೆಯ ಬಹಳ ದೊಡ್ಡ ಲೋಪವಾಗಿದೆ, ಗೃಹ ಸಚಿವರು ಅವರು ಇಲಾಖೆ ಬಿಟ್ಟು ಬೇರೆಲ್ಲ ಇಲಾಖೆ ಬಗ್ಗೆ ಮಾತಾಡ್ತಾರೆ
ಗೃಹ ಇಲಾಖೆಯನ್ನು ಬೇರೆಯವರಿಗೆ ವಹಿಸ್ಬೇಕು ಇಲ್ಲ ಅವರು ವ್ಯವಸ್ಥಿತವಾಗಿ ನಿಭಾಯಿಸುವಂತಾಗಬೇಕು
ಇಲ್ಲವಾದಲ್ಲಿ ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಸ್ಥಾಪನೆ ಆಗೊಲ್ಲ ಜೈಲಿನಲ್ಲಿ ಪಾರ್ಟಿಗಳು, ಮಾದಕ ವಸ್ತುಗಳು, ತಲ್ವಾರ್ ಗಳು, ಪಿಸ್ತೂಲ್ ಗಳು ಸಿಕ್ತಿವೆ
ಪರಿಸ್ಥಿತಿ ಹೀಗೆ ಮುಂದುವರೆದ್ರೆ ಕರ್ನಾಟಕ ರಾಜ್ಯಕ್ಕೆ ಕಳಂಕ ಬರುತ್ತೆ. ಗೃಹ ಸಚಿವರು ಈ ವಿಚಾರದಲ್ಲಿ ತಕ್ಷಣ ಎಚ್ಚೆತ್ತುಕೊಳ್ಳಬೇಕು ಗೃಹ ಸಚಿವರು ಸುಮ್ಮನೆ ಇರಲು ಆಗೋದಿಲ್ಲ ತುಂಬಾ ಜವಾಬ್ದಾರಿ ಇದೆ ರಾಜ್ಯದ ಶಾಂತಿ ಸುವ್ಯವಸ್ಥೆ ಕಾಪಾಡಬೇಕು ಮಾನ ಪ್ರಾಣ ಕಾಪಾಡುವಲ್ಲಿ ಕಾಳಜಿ ವಹಿಸಬೇಕು
*ಈ ನಿಟ್ಟಿನಲ್ಲಿ ಮುಂದಾಗಬೇಕು ಇಲ್ಲ ಗೃಹ ಸಚಿವ ಸ್ಥಾನ ಬಿಟ್ಟು ಇಳಿಯಬೇಕು ಎಂದ ಆರಗ ಜ್ಞಾನೇಂದ್ರ*

