Home ಅಪರಾಧ ಶಿವಮೊಗ್ಗದ ವಾಟೆಕೂಡ್ಲು ಗ್ರಾಮದಲ್ಲಿ ರಸ್ತೆ ಬದಿ ವಾಮಾಚಾರ ಪತ್ತೆ ಪೊಲೀಸ್ ಠಾಣೆ ಮೆಟ್ಟಿಲೇರಿದ ಗ್ರಾಮಸ್ಥರು

ಶಿವಮೊಗ್ಗದ ವಾಟೆಕೂಡ್ಲು ಗ್ರಾಮದಲ್ಲಿ ರಸ್ತೆ ಬದಿ ವಾಮಾಚಾರ ಪತ್ತೆ ಪೊಲೀಸ್ ಠಾಣೆ ಮೆಟ್ಟಿಲೇರಿದ ಗ್ರಾಮಸ್ಥರು

by Mahesh malenaadu

ಹೊಸನಗರ ತಾಲೂಕಿನ ಹುಂಚ ಗ್ರಾ.ಪಂ. ವ್ಯಾಪ್ತಿಯ ಹೊನ್ನೆಬೈಲು ಗ್ರಾಮದ ವಾಟೆಕೂಡ್ಲು ರಸ್ತೆ ಬದಿಯಲ್ಲಿ ವಾಮಾಚಾರ ಮಾಡಿರುವ ಘಟನೆ ಗುರುವಾರದಂದು ಬೆಳಕಿಗೆ ಬಂದಿದೆ.

 

ಈ ವಾಮಾಚಾರ ಗ್ರಾಮಸ್ಥರಲ್ಲಿ ಆತಂಕ ಮೂಡಿಸಿದ್ದು ಗ್ರಾಮಸ್ಥರೆಲ್ಲ ಸೇರಿ ರಿಪ್ಪನಪೇಟೆ ಪೊಲೀಸ್ ಠಾಣೆಗೆ ದೂರು ದಾಖಲಿಸಿದ್ದಾರೆ.

ಗ್ರಾಮದ ಕೆಲವರ ಮನೆಗಳಿಗೆ ತೆರಳುವ ರಸ್ತೆಯ ಪಕ್ಕದಲ್ಲಿ ವಾಮಾಚಾರ ಮಾಡಿರುವುದು ಬೆಳಕಿಗೆ ಬಂದಿದ್ದು
ಈ ದೃಶ್ಯವನ್ನು ಕಂಡು ಭಯಗೊಂಡು ಕೂಲಿ ಕೆಲಸಕ್ಕೆ ತೆರಳುತ್ತಿದ್ದ ಮಹಿಳೆ ಅಸ್ವಸ್ಥ ಗೊಂಡಿದ್ದಾರೆ. !?

ಈ ರಸ್ತೆಯಲ್ಲಿ ಸಂಚರಿಸುವ ಶಾಲಾ ಮಕ್ಕಳು, ಸಾರ್ವಜನಿಕರಲ್ಲಿ ಭಯದ ವಾತಾವರಣ ನಿರ್ಮಾಣವಾಗಿದ್ದು

ವಾಮಾಚಾರ ನಡೆಸಿದವರನ್ನು ಪತ್ತೆಹಚ್ಚಿ, ಅಗತ್ಯ ಕ್ರಮ ಕೈಗೊಳ್ಳ ಬೇಕು ಹಾಗೂ ಗ್ರಾಮಸ್ಥರಿಗೆ ರಕ್ಷಣೆ ನೀಡಬೇಕು ಎಂದು ರಿಪ್ಪನಪೇಟೆ ಪೊಲೀಸರಿಗೆ ಗ್ರಾಮಸ್ಥರು ಮನವಿ ಮಾಡಿಕೊಂಡಿದ್ದಾರೆ.

Spread the love

You may also like

Leave a Comment