ಸರ್ಕಾರದ ಬರಗಾಲ ಹೇಳಿಕೆಗೆ ಶಿವಮೊಗ್ಗದಲ್ಲಿ ಸಂಸದ ಬಿ.ವೈ. ರಾಘವೇಂದ್ರ ಪ್ರತಿಕ್ರೀಯ
ಈ ಬಾರಿಯ ಬರಗಾಲವನ್ನು ರಾಷ್ಟ್ರೀಯ ವಿಪತ್ತು ಎಂದು ಘೋಷಣೆ ಮಾಡಿ ಕೇಂದ್ರ ಸರ್ಕಾರ ಬರ ಪರಿಹಾರ ನೀಡಲಿ ಎಂದು ಕಾಂಗ್ರೆಸ್ ನಾಯಕರ ಹೇಳಿಕೆ ವಿಚಾರ ಶಿವಮೊಗ್ಗದಲ್ಲಿ ಎಂಪಿ ರಾಘವೇಂದ್ರ ಪ್ರತಿಕ್ರಿಯೆ ನೀಡಿದ್ದಾರೆ.
ಮೊದಲು ತಮ್ಮ ಕರ್ತವ್ಯ ಮುಗಿಸಿ, ರೈತರ, ಜನರಲ್ಲಿ ವಿಶ್ವಾಸ ಮೂಡಿಸುವ ಕೆಲಸ ಮೊದಲು ಅವರು ಮಾಡಲಿ
ಈಗಿರುವ ಮಳೆಯನ್ನು, ಡ್ಯಾಂ ನೀರನ್ನು ನಂಬಿಕೊಂಡು ಉಳುಮೆ ಮಾಡಬೇಡಿ
ರಾಜ್ಯದಲ್ಲಿ ನೀರಿನ ಸಮಸ್ಯೆ ಉಂಟಾಗಲಿದೆ ಎಂದು ಈಗಾಗಲೇ ಮುಖ್ಯಮಂತ್ರಿಗಳೆ ಹೇಳಿಕೆ ನೀಡಿದ್ದಾರೆ.
ಮೊದಲು ರಾಜ್ಯ ಸರ್ಕಾರ ಕಡಿಮೆ ನೀರಿನಲ್ಲಿ ಬೆಳೆ ಬೆಳೆಯುವುದರ ಬಗ್ಗೆ ಕೃಷಿ ಇಲಾಖೆ ಮೂಲಕ ರೈತರಿಗೆ ತಲುಪಿಸಲಿ
ಕೇಂದ್ರ ಸರ್ಕಾರಕ್ಕೆ ಪರಿಹಾರ ಕೇಳುವ ಹಕ್ಕು ರಾಜ್ಯಕ್ಕಿದೆ
*ಆಗುಂಬೆ ಘಾಟಿಯಲ್ಲಿ ಟನಲ್ ನಿರ್ಮಾಣ ಮಾಡುವ ವಿಚಾರಕ್ಕೆ ಸಂಬಂಧಿಸಿದಂತೆ ನಿನ್ನೆ ಸಭೆ ನಡೆಸಿದ್ದೆನೆ*
ಕಳೆದ ವರ್ಷ ರಾಜ್ಯದ ರಾಷ್ಟ್ರೀಯ ಹೆದ್ದಾರಿಗಾಗಿ ಒಂದು ರೂ. ಸಹ ಬಿಡುಗಡೆಯಾಗಿಲ್ಲ ನಾಳೆ ಶುಕ್ರವಾರ ಸಂಜೆ ಬೆಂಗಳೂರಿನಲ್ಲಿ ಆಗುಂಬೆ ಸುರಂಗ ಮಾರ್ಗ ವಿಚಾರದಲ್ಲಿ ಸಭೆ ಕರೆದಿದ್ದೆನೆ
ಈಗಾಗಲೇ ಆಗುಂಬೆ ಸುರಂಗ ಮಾರ್ಗಕ್ಕೆ 420 ಕೋಟಿ ರೂ. ಮೀಸಲಿರಿಸಲಾಗಿದೆ, ಆದರೆ ಇಲ್ಲಿ ಅರಣ್ಯ ಇಲಾಖೆ ಜಾಗವೂ ಇರುವುದರಿಂದ ನಾಳೆ ದೆಹಲಿಯಲ್ಲಿ ಕೇಂದ್ರ ಅರಣ್ಯ ಸಚಿವರನ್ನು ಭೇಟಿ ಮಾಡಲಿದ್ದೆನೆ
ಇದಕ್ಕಾಗಿ ಕೇರಳದ ಅತ್ಯುನ್ನತ ಅಧಿಕಾರಿಯನ್ನು ಸಹ ನಾವು ಕರೆಸಿದ್ದೆವೆ. ಆಗುಂಬೆ ಘಾಟಿಯಲ್ಲಿ ಬರುವ ಏರಿಳಿತಗಳನ್ನು ಗಣನೆಗೆ ತೆಗೆದುಕೊಂಡು ಚರ್ಚಿಸಲಾಗುತ್ತಿದೆ
*ಪ್ರಕೃತಿ, ಪರಿಸರವನ್ನು ಉಳಿಸಿ ಸುರಂಗ ಮಾರ್ಗ ನಿರ್ಮಿಸಲು ಅಡ್ಡಿ ಇಲ್ಲ ಎಂದ ರಾಘವೇಂದ್ರ*
*ಶಿವಮೊಗ್ಗದಲ್ಲಿ ಬರದ ಛಾಯೆ ಆವರಿಸಿರುವ ಹಿನ್ನೆಲೆಯಲ್ಲಿ ಏತ ನೀರಾವರಿ ಯೋಜನೆ ಬಳಸಿಕೊಂಡು ಕೆರೆಗಳನ್ನು ತುಂಬಿಸಲಾಗುತ್ತಿದೆ*
ಶಿಕಾರಿಪುರದಲ್ಲೂ ಕೂಡ ಏತ ನೀರಾವರಿ ಯೋಜನೆ ಮೂಲಕವೇ ತುಂಗಾಭದ್ರಾ ನೀರನ್ನು ಕೆರೆಗಳನ್ನು ತುಂಬಿಸಲು ಬಳಸಿಕೊಳ್ಳಲಾಗುತ್ತಿದೆ,ಇವೆಲ್ಲವೂ ಆಧುನಿಕ ಭಗಿರಥ ಮಾಜಿ ಸಿಎಂ ಯಡಿಯೂರಪ್ಪ ಅವರ ಇಚ್ಛಾಶಕ್ತಿಯಿಂದ ಯೋಜನೆಗಳು ಸಫಲವಾಗಿವೆ, ರಾಜ್ಯ ಸರ್ಕಾರದಿಂದ ಅಗತ್ಯ ಹಣ ಬಿಡುಗಡೆ ಮಾಡಿಸಿಕೊಂಡು ಏತ ನೀರಾವರಿ ಯೋಜನೆಗೆ ಮೋಟಾರ್ ಚಾಲನೆ ಮಾಡಿಸಲಾಗಿದೆ
ನೀರು ಸಮುದ್ರಕ್ಕೆ ಸೇರುವ ಬದಲು ಕೆರೆಗಳನ್ನು ತುಂಬಿಸಲು ಪ್ರಯೋಜನವಾಗುತ್ತಿದೆ
ಈ ಸಂದರ್ಭದಲ್ಲಿ ಎಲ್ಲಾ ರೈತರು ಯಡಿಯೂರಪ್ಪ ಅವರನ್ನು ಸ್ಮರಿಸಿಕೊಳ್ಳುವುದೇ ಗೌರವ

