Home Uncategorized ಭರತನಾಟ್ಯ ಭಾವ ರಾಗ ತಾಳಗಳ ಸಂಗಮ ಶಿರಸ್ತೆದಾರ್ ವಿನಯ್ ಎಂ ಆರಾಧ್ಯ ಅಭಿಮತ,

ಭರತನಾಟ್ಯ ಭಾವ ರಾಗ ತಾಳಗಳ ಸಂಗಮ ಶಿರಸ್ತೆದಾರ್ ವಿನಯ್ ಎಂ ಆರಾಧ್ಯ ಅಭಿಮತ,

by Mahesh malenaadu

ಶಿಕಾರಿಪು:  ಆ-8  ರಂದು ಗುರು ಪೂರ್ಣಿಮೆಯ ಪ್ರಯುಕ್ತ ನೃತ್ಯ ನಮನ, ನಾಲ್ಕನೇ ವರ್ಷದ ಭರತನಾಟ್ಯ ಕಾರ್ಯಕ್ರಮವನ್ನು ನೃತ್ಯ ನೂಪುರ ಟ್ರಸ್ಟ್ ಶಿಕಾರಿಪುರ ಇವರು ಶಿವಗಿರಿ ಸಮುದಾಯ ಭವನದಲ್ಲಿ ಆಯೋಜಿಸಲಾಗಿದ್ದ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳು ತಮ್ಮ ವಿದ್ಯಾಭ್ಯಾಸದ ಜೊತೆಗೆ ಈ ರೀತಿಯ ಸಾಂಪ್ರದಾಯಿಕ ನೃತ್ಯಗಳನ್ನು ಕಲಿಯುವುದರ ಮುಖಾಂತರ ನಮ್ಮ ಪ್ರಾಚೀನ ಕಲೆಗಳಲ್ಲಿ ಮುಖ್ಯವಾದ ಭರತನಾಟ್ಯಕಲೆ ಉಳಿಯಲು ಸಾಧ್ಯವಾಗುತ್ತದೆ,

ಈ ರೀತಿಯ ಚಟುವಟಿಕೆಯಲ್ಲಿ ತೊಡಗಿದ ಮಕ್ಕಳು ವಿದ್ಯಾಭ್ಯಾಸದಲ್ಲೂ ಕೂಡ ಮುಂದಿರುತ್ತಾರೆ ಆದ್ದರಿಂದ ಪೋಷಕರು ಇಂತಹ ಪ್ರಕಾರಗಳಲ್ಲಿ ಕಡ್ಡಾಯವಾಗಿ ಸೇರಿಸಿ ವಿದ್ಯಾರ್ಥಿಗಳ ಬಹುಮುಖ ಪ್ರತಿಭೆಗೆ ವೇದಿಕೆಯನ್ನು ನೀಡಬೇಕು ಎಂದು ವಿನಯ ಎಂ, ಆರಾಧ್ಯ, ಶಿರಸ್ತೆದಾರ್ ಶಿಕಾರಿಪುರ ತಿಳಿಸಿದರು,

ಟ್ರಸ್ಟ್ ನ ಕಾರ್ಯದರ್ಶಿ ಚೈತನ್ಯ ಎನ್ ಇವರು ಮಾತನಾಡಿ ನಾನು ಬಿಕಾಂ ಹಾಗೂ ಎಂಕಾಂ ಪದವಿಧರೆಯಾಗಿದ್ದು, ಭರತನಾಟ್ಯದಲ್ಲಿ ಉನ್ನತ ಪದವಿ ಪಡೆದಿದ್ದು ಶಿಕಾರಿಪುರದ ಮಕ್ಕಳಿಗೆ ಭರತನಾಟ್ಯ ಕಲಿಸುವ ನಿಟ್ಟಿನಲ್ಲಿ 2015 ರಲ್ಲಿ ಭರತನಾಟ್ಯವನ್ನು ಕಲಿಸುತ್ತಿದ್ದು ನಮ್ಮ ಟ್ರಸ್ಟ್ ಮುಖಾಂತರ ಅನೇಕ ವಿದ್ಯಾರ್ಥಿಗಳಿಗೆ ಭರತನಾಟ್ಯದಲ್ಲಿ ಜೂನಿಯರ್, ಸೀನಿಯರ್ ಪರೀಕ್ಷೆಗಳನ್ನ ಕಟ್ಟಿಸಿ ಅದರಲ್ಲಿ ಉತ್ತೀರ್ಣರಾಗುವಂತೆ ಮಾಡಿರುತ್ತೇನೆ, ಆಯುಷ್ ಟಿವಿಯಲ್ಲಿ ನಮ್ಮ ನೃತ್ಯ ಶಾಲೆಯ 25ಕ್ಕೂ ಹೆಚ್ಚು ವಿದ್ಯಾರ್ಥಿಗಳು ನೃತ್ಯ ಪ್ರದರ್ಶನ ನೀಡಿದ್ದಾರೆ, ಶಿಕಾರಿಪುರದ ಮಾರಿಕಾಂಬ ಹುಚ್ಚರಾಯಸ್ವಾಮಿ ಜಾತ್ರೆಯ ಸಂದರ್ಭದಲ್ಲಿ ವಿದ್ಯಾರ್ಥಿಗಳು ಉಚಿತವಾಗಿ ನೃತ್ಯ ಸೇವೆ ಸಲ್ಲಿಸಿರುತ್ತಾರೆ, ಈ ಟ್ರಸ್ಟ್ ಮುಖಾಂತರ ಭರತನಾಟ್ಯ ಕಲೆಯನ್ನು ಉಳಿಸುವ ಪ್ರಯತ್ನದಲ್ಲಿ ನಾನು ಅಳಿಲು ಸೇವೆಯನ್ನ ಸಲ್ಲಿಸುತ್ತಿದ್ದೇನೆ, ನಿಮ್ಮೆಲ್ಲರ ಆಶೀರ್ವಾದ ಪ್ರೀತಿ ಇದ್ದಲ್ಲಿ ಇದನ್ನ ಇನ್ನು ಎತ್ತರಕ್ಕೆ ಕೊಂಡೊಯ್ಯುವ ಪ್ರಯತ್ನ ಮಾಡುತ್ತೇನೆ ಎಂದು ತಿಳಿಸಿದರು,

ಮತ್ತೋರ್ವ ಅತಿಥಿಯಾದ ಈರೇಶ್ ಖ್ಯಾತ ಉದ್ಯಮಿ ಇವರು ವಿದ್ಯಾರ್ಥಿಗಳು ಶಾಲೆಯ ನಂತರ ಮೊಬೈಲ್ ಬಳಕೆ ಮಾಡುತ್ತಿದ್ದು, ಅವರ ಮಾನಸಿಕ ಸ್ಥೈರ್ಯ ಕಡಿಮೆಯಾಗುತ್ತದೆ, ಅವುಗಳಿಂದ ದೂರ ಇರಲು ಭರತನಾಟ್ಯ ,ನಾಟಕ, ಕರಾಟೆ ,ಆಟೋಟಗಳಗೆ ಸೇರಿಸಬೇಕು ,ಇತ್ತೀಚಿನ ದಿನಗಳಲ್ಲಿ ವೈಭವ್ ಸೂರ್ಯವಂಶಿ ತನ್ನ ಚಿಕ್ಕ ವಯಸ್ಸಿನಲ್ಲಿ ಅತ್ಯದ್ಭುತ ಸಾಧನೆ ಮಾಡಿದ್ದಾನೆ ಅವನು ಓದಿರುವುದು ಕೇವಲ ಹತ್ತನೇ ತರಗತಿ ಮಾತ್ರ ಅವನ ತಂದೆ ಅವನ ಕ್ರಿಕೆಟ್ ಅಕಾಡೆಮಿಗೆ ಸೇರಿಸಲು ತನ್ನ ಎರಡು ಎಕರೆ ಜಮೀನನ್ನ ಮಾರಾಟ ಮಾಡಿ ಅಕಾಡೆಮಿಗೆ ಸೇರಿಸುತ್ತಾರೆ ಇಂದು ಆ ಪ್ರತಿಭೆ ಅದರ 10 ಪಟ್ಟು ತನ್ನ ತಂದೆಗೆ ಹಿಂದಿರುಗಿಸಿ ಕೊಟ್ಟಿರುವುದು ಇಂದಿನ ಯುವ ಜನತೆಗೆ ಸ್ಪೂರ್ತಿದಾಯಕ ಎಂದು ತಿಳಿಸಿದರು.

ಮತ್ತೋರ್ವ ಮುಖ್ಯ ಅತಿಥಿಯಾದ ಡಾಕ್ಟರ್ ಸಿಆರ್ ಪರಶುರಾಮ್ ಅಧ್ಯಕ್ಷರು ಜೋಗಪ್ಪ ಸೇವಾ ಸಮಿತಿ ಶಿಕಾರಿಪುರ, ರಾಜ್ಯ ಹಾಗೂ ರಾಷ್ಟ್ರ ಪ್ರಶಸ್ತಿ ವಿಜೇತರಾದವರು ಸನ್ಮಾನವನ್ನ ಸ್ವೀಕರಿಸಿ ವಿದ್ಯಾರ್ಥಿಗಳು ಬಹುಮುಖ ಪ್ರತಿಭಾವಂತರಾಗಿದ್ದು ಆ ವಿದ್ಯಾರ್ಥಿಗಳಿಗೆ ಯಾವುದು ಇಷ್ಟ ಯಾವುದು ಕಷ್ಟ ಎನ್ನುವುದನ್ನು ಪೋಷಕರು ಗುರುತಿಸಿ ಅವರ ಇಷ್ಟದ ದಾರಿಯಲ್ಲಿಯೇ ಪ್ರೋತ್ಸಾಹಿಸಿ ಎಂದು ಕರೆ ನೀಡಿದರು,

ಪಿ ಎಲ್ ಡಿ ಬ್ಯಾಂಕ್ ನ ಮಾಜಿ ಅಧ್ಯಕ್ಷರಾದ  ನಾಗಪ್ಪ ಬಿ ಅಂಬಾರಗೊಪ್ಪ ಇವರು ವಿದ್ಯಾರ್ಥಿಗಳಿಗೆ ನೆನಪಿನ ಕಾಣಿಕೆಯನ್ನು ವಿತರಿಸಿ, ವಿದ್ಯಾರ್ಥಿಗಳಿಗೆ ಶುಭ ಹಾರೈಸಿದರು, ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಶ್ರೀಮತಿ ಸಾವಿತ್ರಮ್ಮ ಶ್ರೀನಿವಾಸ ಆಚಾರ್ ಇವರು ನೆರದಿರುವ ಪುಟಾಣಿ ಮಕ್ಕಳಿಗೆ ಹಾಗೂ ಪೋಷಕರಿಗೆ ಶುಭ ಹಾರೈಸಿ ಕಾರ್ಯಕ್ರಮ ಯಶಸ್ವಿಯಾಗಲಿ ಎಂದು ತಿಳಿಸಿದರು, ದಾವಣಗೆರೆ ಕ್ಲಾಕ್ ಎಂಪೋರಿಯಂ ಮಾಲೀಕರಾದ ರಾಜು ಕೆ ಪಿ, ಕುಮದ್ವತಿ ಪಿಯು ಕಾಲೇಜಿನ ಪ್ರಾಚಾರ್ಯರಾದ ಡಾ. ವೀರೇಂದ್ರ ಎಂ, ಪಿ,ಎಸ್ ಗೀತಾ ಭಟ್, ನೂಪುರ ಟ್ರಸ್ಟ್ ನ ಕಾರ್ಯದರ್ಶಿ ವಿದುಷಿ ಚೈತನ್ಯ ಎನ್ ಉಪಸ್ಥಿತರಿದ್ದರು, ಈ ಕಾರ್ಯಕ್ರಮವನ್ನು ಶ್ರೀಮತಿ ಸ್ವಾತಿ ರೇಣುಕಪ್ಪ ಸ್ವಾಗತಿಸಿ, ಶ್ರೀಮತಿ ವಿಶಾಲಾಕ್ಷಿ ಹಾಲಸ್ವಾಮಿ ವಂದಿಸಿ, ಶ್ರೀಮತಿ ಸ್ವಾತಿ ಬಸವರಾಜ್ ನಿರೂಪಿಸಿದರು, ವಿದ್ಯಾರ್ಥಿಗಳಿಂದ ಭರತನಾಟ್ಯ ಪ್ರದರ್ಶನ ಏರ್ಪಡಿಸಲಾಗಿತ್ತು,

Spread the love

You may also like

Leave a Comment