107
ಶಿವಮೊಗ್ಗ: ಜಿಲ್ಲೆಯ ತೀರ್ಥಹಳ್ಳಿ ತಾಲ್ಲೂಕಿನ ಆಗುಂಬೆ ಬಳಿ ಚಲಿಸುತ್ತಿದ್ದ ಬಸ್ಸಿನ ವೀಲ್ ಕಳಿಚಿರುವ ಘಟನೆ ಸೋಮವಾರ ಮಧ್ಯಾನ ಸಂಭವಿಸಿದೆ.
ಉಡುಪಿಯಿಂದ ಶಿವಮೊಗ್ಗ ತೆರಳುತ್ತಿದ್ದ ಕೆ.ಎಸ್.ಆರ್.ಟಿ.ಸಿ. ಬಸ್ಸಿನ ಹಿಂಬದಿಯ ವೀಲ್ ಕಳಚಿದ್ದು ತಕ್ಷಣವೇ ಬಸ್ ಅಲ್ಲೇ ನಿಂತ ಪರಿಣಾಮ ಯಾವುದೇ ಅವಘಡ ಸಂಭವಿಸಿಲ್ಲ ಎಂದು ತಿಳಿದು ಬಂದಿದೆ.
ಬಸ್ಸಿನ ಟೈರ್ ಕಳಚಿದ ಪರಿಣಾಮ ಉಂಟಾಗಬಹುದಾಗಿದ್ದ ಭಾರಿ ಅನಾಹುತವೊಂದು ತಪ್ಪಿದೆ
ಆಗುಂಬೆ ಸಮೀಪ ಬರುತ್ತಿದ್ದಂತೆ ಬಸ್ ನಿಂದ ವೀಲ್ ಕಳಚಿ ಹೋಗಿದೆ ಈ ವೇಳೆ ಬಸ್ ನಲ್ಲಿ ಹಲವಾರು ಪ್ರಯಾಣಿಕರು ಪ್ರಯಾಣಿಸುತ್ತಿದ್ದು ಅದೃಷ್ಟವಶಾತ್ ಯಾವುದೇ ಪ್ರಯಾಣಿಕರಿಗೆ ತೊಂದರೆ ಯಾಗಿಲ್ಲ.
ಏಕಾಏಕಿ ಬಸ್ ನಿಂದ ವೀಲ್ ಕಳಚಿ ಬಿದ್ದಿದ್ದು ಹೇಗೆ ಎಂಬುದರ ಬಗ್ಗೆ ಪ್ರಯಾಣಿಕರು ಹಾಗೂ ಸ್ಥಳಿಯರಲ್ಲಿ ಪ್ರಶ್ನೆ ಮೂಡಿದ್ದು. ತಕ್ಷಣದ ಪರಿಸ್ತಿತಿಯಲ್ಲಿ
ಬಸ್ ನಲ್ಲಿದ್ದವರನ್ನು ಬೇರೆ ಬಸ್ ನಲ್ಲಿ ನಿರ್ವಾಹಕರು ಕಳುಹಿಸಿಕೊಟ್ಟಿದ್ದಾರೆ.

