Home ಅಪರಾಧ ಗಣಪತಿ ಕೆರೆ ದಂಡೆಯಲ್ಲಿ ನಿಯಂತ್ರಣ ತಪ್ಪಿ ಪಲ್ಟಿಯಾದ ಸ್ಕಾರ್ಪಿಯೊ; ಕಾರಿನಲ್ಲಿದ್ದವರು ನಾಪತ್ತೆ!

ಗಣಪತಿ ಕೆರೆ ದಂಡೆಯಲ್ಲಿ ನಿಯಂತ್ರಣ ತಪ್ಪಿ ಪಲ್ಟಿಯಾದ ಸ್ಕಾರ್ಪಿಯೊ; ಕಾರಿನಲ್ಲಿದ್ದವರು ನಾಪತ್ತೆ!

by Mahesh malenaadu

ಗಣಪತಿ ಕೆರೆ ದಂಡೆಯಲ್ಲಿ ನಿಯಂತ್ರಣ ತಪ್ಪಿ ಪಲ್ಟಿಯಾದ ಸ್ಕಾರ್ಪಿಯೊ; ಕಾರಿನಲ್ಲಿದ್ದವರು ನಾಪತ್ತೆ

ಶಿವಮೊಗ್ಗ : ​ಸಾಗರ ಪಟ್ಟಣದ ಗಣಪತಿ ಕೆರೆಯಿಂದ ಅಗ್ರಹಾರಕ್ಕೆ ತೆರಳುವ ಮಾರ್ಗದ ತಿರುವಿನಲ್ಲಿ ಸ್ಕಾರ್ಪಿಯೊ ಕಾರೊಂದು ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾದ ಘಟನೆ ನಡೆದಿದೆ.
​ವಿದ್ಯುತ್ ಟ್ರಾನ್ಸ್‌ಫಾರ್ಮರ್ (ಟಿ.ಸಿ.) ಹಾಗೂ ಕೆರೆಯ ತಡೆಗೋಡೆಯ ಚಾನಲ್ ನಡುವಿನ ಕಿರಿದಾದ ಜಾಗದಲ್ಲಿ ಕಾರು ಬಿದ್ದಿದೆ. ಅಪಘಾತ ಸಂಭವಿಸಿದ ವೇಳೆ ಕಾರಿನಲ್ಲಿ ಯಾರೂ ಇಲ್ಲದಿರುವುದು ಸಾರ್ವಜನಿಕರಲ್ಲಿ ತೀವ್ರ ಕುತೂಹಲ ಹಾಗೂ ಅನುಮಾನಕ್ಕೆ ಕಾರಣವಾಗಿದೆ. ಕಾರು ಹೇಗೆ ಅಪಘಾತಕ್ಕೀಡಾಯಿತು ಮತ್ತು ಘಟನೆಯ ವೇಳೆ ಒಳಗಿದ್ದವರು ಯಾರು ಎಂಬ ಬಗ್ಗೆ ಸದ್ಯಕ್ಕೆ ಯಾವುದೇ ಅಧಿಕೃತ ಮಾಹಿತಿ ಸಿಕ್ಕಿಲ್ಲ.
​ಸದ್ಯ ಪಲ್ಟಿಯಾದ ಕಾರಿನ ಫೋಟೊಗಳು ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ವೈರಲ್ ಆಗುತ್ತಿದ್ದು, ಘಟನೆ ಕುರಿತು ಹೆಚ್ಚಿನ ವಿವರಗಳನ್ನು ನಿರೀಕ್ಷಿಸಲಾಗಿದೆ.

Spread the love

You may also like

Leave a Comment